ಶನಿವಾರಸಂತೆ, ನ. 10: ಸಮೀಪದ ಮಾಲಂಬಿ ಗ್ರಾಮದ ಕೂಡುರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾತ್ರಿ ಗಸ್ತಿನಲ್ಲಿದ್ದ ಶನಿವಾರಸಂತೆ ಪೊಲೀಸರು ಧಾಳಿ ಮಾಡಿ, ನಾಲ್ವರು ಆರೋಪಿಗಳನ್ನು ಬಂಧಿಸಿ, ಕಣದಲ್ಲಿದ್ದ ರೂ. 2 ಸಾವಿರ ವಶಪಡಿಸಿಕೊಂಡ ಘಟನೆ ನಡೆದಿದೆ. ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಮಾಲಂಬಿ ಗ್ರಾಮದ ಶಶಿಧರ್, ಜಾಗೇನಹಳ್ಳಿ ಗ್ರಾಮದ ಡಿ.ಎಸ್. ನಟೇಶ್, ಆಲೂರು-ಸಿದ್ದಾಪುರ ಗ್ರಾಮದ ಹರ್ಷಿತ್, ಯತೀಶ್ ಬಂಧಿತ ಆರೋಪಿಗಳು. ಚಿನ್ನಪ್ಪ ಪರಾರಿಯಾದ ಆರೋಪಿ. ಆರೋಪಿಗಳ ಸಹಿತ ಕಣದಲ್ಲಿದ್ದ ಹಣ ಹಾಗೂ ವಸ್ತುಗಳನ್ನು ವಶಪಡಿಸಿಕೊಂಡು ಪೊಲೀಸ್ ಪ್ರಕರಣ ದಾಖಲಿಸಿ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.