ಮಡಿಕೇರಿ, ನ. 9: ಈ ಹಿಂದೆಂದೂ ಕಂಡು -ಕೇಳರಿಯದ ರೀತಿಯ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಮಡಿಕೇರಿ ತಾಲೂಕಿನ ಒಂದಷ್ಟು ಗ್ರಾಮಗಳು, ಸೋಮವಾರಪೇಟೆ ತಾಲೂಕಿನ ಕೆಲವು ಭಾಗಗಳು ಭೂಕುಸಿತಕ್ಕೆ ಒಳಗಾಗಿ ಊರಿಗೆ ಊರೇ ನಾಶವಾಯಿತು. ಮನೆ, ತೋಟ, ಗದ್ದೆಗಳನ್ನು ಕಳೆದುಕೊಂಡು ಬದುಕೇ ಮಡಿಕೇರಿ, ನ. 9: ಈ ಹಿಂದೆಂದೂ ಕಂಡು -ಕೇಳರಿಯದ ರೀತಿಯ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಮಡಿಕೇರಿ ತಾಲೂಕಿನ ಒಂದಷ್ಟು ಗ್ರಾಮಗಳು, ಸೋಮವಾರಪೇಟೆ ತಾಲೂಕಿನ ಕೆಲವು ಭಾಗಗಳು ಭೂಕುಸಿತಕ್ಕೆ ಒಳಗಾಗಿ ಊರಿಗೆ ಊರೇ ನಾಶವಾಯಿತು. ಮನೆ, ತೋಟ, ಗದ್ದೆಗಳನ್ನು ಕಳೆದುಕೊಂಡು ಬದುಕೇ ಮಡಿಕೇರಿ, ನ. 9: ಈ ಹಿಂದೆಂದೂ ಕಂಡು -ಕೇಳರಿಯದ ರೀತಿಯ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಮಡಿಕೇರಿ ತಾಲೂಕಿನ ಒಂದಷ್ಟು ಗ್ರಾಮಗಳು, ಸೋಮವಾರಪೇಟೆ ತಾಲೂಕಿನ ಕೆಲವು ಭಾಗಗಳು ಭೂಕುಸಿತಕ್ಕೆ ಒಳಗಾಗಿ ಊರಿಗೆ ಊರೇ ನಾಶವಾಯಿತು. ಮನೆ, ತೋಟ, ಗದ್ದೆಗಳನ್ನು ಕಳೆದುಕೊಂಡು ಬದುಕೇ ಮಡಿಕೇರಿ, ನ. 9: ಈ ಹಿಂದೆಂದೂ ಕಂಡು -ಕೇಳರಿಯದ ರೀತಿಯ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಮಡಿಕೇರಿ ತಾಲೂಕಿನ ಒಂದಷ್ಟು ಗ್ರಾಮಗಳು, ಸೋಮವಾರಪೇಟೆ ತಾಲೂಕಿನ ಕೆಲವು ಭಾಗಗಳು ಭೂಕುಸಿತಕ್ಕೆ ಒಳಗಾಗಿ ಊರಿಗೆ ಊರೇ ನಾಶವಾಯಿತು. ಮನೆ, ತೋಟ, ಗದ್ದೆಗಳನ್ನು ಕಳೆದುಕೊಂಡು ಬದುಕೇ ಕೊಡಗು ಶಾಖೆ ಹಾಗೂ ಪ್ರಾಜೆಕ್ಟ್ ಕೂರ್ಗ್ ಸಂಸ್ಥೆಯ ಆಶ್ರಯದಲ್ಲಿ ‘ಯಶಸ್ವಿ’ ಎಂಬ ಯೋಜನೆಯಡಿ ಕಾಲೂರು ಗ್ರಾಮದಲ್ಲಿ ಸಂತ್ರಸ್ತರಿಗೆ ಬದುಕು ರೂಪಿಸುವ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. ಮಹಿಳೆಯರಿಗೆ ಹೊಲಿಗೆ ತರಬೇತಿ ಹಾಗೂ ಮಹಿಳೆ ಹಾಗೂ

(ಮೊದಲ ಪುಟದಿಂದ) ಪುರುಷರಿಗೆ ಆಹಾರ ಉತ್ಪನ್ನಗಳ ತರಬೇತಿ ನೀಡಲಾಗುತ್ತಿದೆ. ಕಾಲೂರಿನ ಶಾಲೆಯಲ್ಲಿ ಈ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಪಡೆದ ನಂತರ ತರಬೇತಿ ಪಡೆದವರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸುವದರೊಂದಿಗೆ ದೊರಕುವ ಹಣವನ್ನು ಸಂತ್ರಸ್ತರಿಗೆ ಆರ್ಥಿಕ ಸ್ವಾವಲಂಬನೆಗಾಗಿ ನೀಡಲಾಗುತ್ತದೆ.

ಮಡಿಕೇರಿಯಲ್ಲಿ ಕೇಂದ್ರ

ಸದ್ಯಕ್ಕೆ ಕಾಲೂರುವಿನಲ್ಲಿ ಸರಕಾರಿ ಶಾಲೆ ಮುಚ್ಚಿರುವದರಿಂದ ಈ ಶಾಲಾ ಕಟ್ಟಡವನ್ನು ಬಳಸಿಕೊಂಡು ತರಬೇತಿ ನೀಡಲಾಗುತ್ತಿದೆ. ಪ್ರಕೃತಿ ವಿಕೋಪಕ್ಕೆ ತುತ್ತಾದ ಇತರ ಪ್ರದೇಶಗಳಲ್ಲೂ ತರಬೇತಿ ಕೇಂದ್ರಗಳನ್ನು ತೆರೆಯುವ ಉದ್ದೇಶ ಇದೆಯಾದರೂ ಕಟ್ಟಡಗಳ ಸೌಕರ್ಯ ಇಲ್ಲದ ಕಾರಣ ಸಾಧ್ಯವಾಗುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಅವಕಾಶ ದೊರೆತಲ್ಲಿ ಸ್ಥಳಾವಕಾಶ ಲಭ್ಯವಾದಲ್ಲಿ ಮಡಿಕೇರಿಯಲ್ಲಿ ಕೇಂದ್ರ ಆರಂಭಿಸಲು ಚಿಂತಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶಗಳ ಆಸಕ್ತರಿಗೆ ಬಂದು ತರಬೇತಿ ಪಡೆಯಲು ಸಹಕಾರಿಯಾಗಲಿದೆ ಎಂದು ವಿದ್ಯಾಭವನದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಹೇಳುತ್ತಾರೆ.

ಪ್ರಥಮ ಹಂತದ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಸ್ಪಂದನ ದೊರೆತಿದೆ. ತರಬೇತಿ ಪಡೆಯುವ ಫಲಾನುಭವಿಗಳಿಗೆ ಶಿಷ್ಯವೇತನ ನೀಡಲಾಗುವದು. 4 ತಿಂಗಳ ಟೈಲರಿಂಗ್ ಹಾಗೂ 3 ತಿಂಗಳ ಆಹಾರ ಉತ್ಪನ್ನ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಇದಲ್ಲದೆ ದೇವಾಲಯಗಳಿಗೆ ಅವಶ್ಯವಿರುವ ಬ್ಯಾಗ್‍ಗಳನ್ನು ಕೂಡ ತಯಾರಿಸುವ ಬಗ್ಗೆ ತರಬೇತಿ ನೀಡಲಾಗುವದು. ಇದರಿಂದ ಸ್ವ ಉದ್ಯೋಗ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಉಚಿತ ಮೆಶಿನ್

ಟೈಲರಿಂಗ್‍ನಲ್ಲಿ ಉತ್ತಮ ಅವಕಾಶಗಳಿವೆ. ಪ್ರಸ್ತುತ 27 ಮಂದಿ ಟೈಲರಿಂಗ್ ಕಲಿಯುತ್ತಿದ್ದಾರೆ. ತರಬೇತಿಯಲ್ಲಿ ಶೇ.90ರಷ್ಟು ಹಾಜರಾತಿಯೊಂದಿಗೆ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರ ನೀಡಲಾಗುವದೆಂದು ಬಾಲಾಜಿ ತಿಳಿಸಿದ್ದಾರೆ. ಫಲಾನುಭವಿಗಳು ತಯಾರಿಸುವ ಉತ್ಪನ್ನಗಳ ಬಗ್ಗೆ ಮಾರುಕಟ್ಟೆ ವ್ಯವಸ್ಥೆಗಾಗಿ ವೆಬ್‍ಸೈಟ್‍ಗಳಲ್ಲಿ ಪ್ರಕಟಿಸಲಾಗುವದು. ಕೊಡವ ಸಮಾಜದವರು ಕೂಡ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವದಾಗಿ ಹೇಳಿದ್ದಾರೆ. ಇದರೊಂದಿಗೆ ಆಹಾರ ಇಲಾಖೆ ಕೂಡ ಕಿಂಚಿತ್ತು ಗಮನ ಹರಿಸಿ ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಿಕೊಟ್ಟಲ್ಲಿ ಮತ್ತಷ್ಟು ಸಹಕಾರಿಯಾಗಲಿದೆ.

ಶೇ.10ರಷ್ಟಾದರೂ ಜಿಲ್ಲೆಯವರಿಗೆ ಅವಕಾಶ ನೀಡಿದರೆ ಆರ್ಥಿಕ ಸಬಲತೆ ಹೊಂದಬಹುದು. ಪ್ರಸ್ತುತ ಎಲ್ಲ ಉತ್ಪನ್ನಗಳು ಹೊರ ರಾಜ್ಯಗಳಿಂದಲೇ ಬರುತ್ತಿವೆ. ಇನ್ನಾದರೂ ಇಲ್ಲಿಯವರಿಗೆ ಅವಕಾಶ ಕಲ್ಪಿಸುವಂತಾಗಲಿ ಎಂದು ಅವರು ಅಭಿಪ್ರಾಯಿಸಿದ್ದಾರೆ.

-ಕುಡೆಕಲ್ ಸಂತೋಷ್.