ಶನಿವಾರಸಂತೆ, ನ. 9: ಸಮೀಪದ ಮನೆಹಳ್ಳಿ ಶ್ರೀ ಕ್ಷೇತ್ರ ತಪೋವನ ಮಠದಲ್ಲಿ ಗುರುವಾರ ಶ್ರೀಗುರು ಸಿದ್ಧವೀರೇಶ್ವರ ಸ್ವಾಮಿಯ ಶಿಲಾ ದೇವಾಲಯ ನಿರ್ಮಾಣಕ್ಕೆ ವೀರಾಜಪೇಟೆ ಅರಮೇರಿ ಕಳಂಚೇರಿ ಮಠಧೀಶ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶಂಕುಸ್ಥಾಪನೆ ನೆರವೇರಿಸಿದರು. ಪೂಜಾ ಕಾರ್ಯವನ್ನು ತಪೋವನ ಮಠಧೀಶ ಮಹಾಂತ ಶಿವಲಿಂಗ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಕರಕಲಗೂಡು ಚಿಲುಮೆ ಮಠದ ಜಯದೇವ ಸ್ವಾಮೀಜಿ ನೆರವೇರಿಸಿದರು.ತಪೋವನ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಎಂ.ಎಂ. ಸುರೇಶ್, ಖಜಾಂಚಿ ಕೆ.ಹೆಚ್. ಮಂಜು, ಸದಸ್ಯರಾದ ಬಿ.ಎನ್. ಪ್ರಕಾಶ್, ಮಾಗೋಡು ಬಸವರಾಜ್, ಎಸ್.ಸಿ. ಚಂದ್ರಕಾಂತ್, ಓ.ಆರ್. ಓಂಕಾರ್ ಪಟೇಲ್, ಎಸ್.ಟಿ. ಗೌರವ್, ಮೋಹನ್, ಚೇತನ್ ಹಾಗೂ ಎಲ್.ಎನ್. ರಾಜಶೇಖರ್ ಹಾಜರಿದ್ದರು.