ಸೋಮವಾರಪೇಟೆ, ನ. 10: ಇಲ್ಲಿನ ತಥಾಸ್ತು ಸಾತ್ವಿಕ ಸಂಸ್ಥೆಯ ಅಶ್ರಯದಲ್ಲಿ ನೂತನವಾಗಿ ರಚಿಸಲಾಗಿರುವ ನಯನ ಮಹಿಳಾ ಘಟಕವನ್ನು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಶಿವಪ್ರಸಾದ್ ಉದ್ಘಾಟಿಸಿದರು. ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ನೂತನ ಸಂಘವನ್ನು ಉದ್ಘಾಟಿಸಿದ ವೈದ್ಯಾಧಿಕಾರಿಗಳು ಮಾತನಾಡಿ, ಸಂಘ-ಸಂಸ್ಥೆಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆಯಿತ್ತರು. ಈ ಸಂದರ್ಭ ತಥಾಸ್ತು ಸಂಸ್ಥೆಯ ಅಧ್ಯಕ್ಷ ರವೀಂದ್ರ ಹಾನಗಲ್ಲು, ಜಿಲ್ಲಾ ರಕ್ತ ನಿಧಿ ಘಟಕದ ಅಧಿಕಾರಿ ಕರುಂಬಯ್ಯ, ಮಜ್ದೂರ್ ಸಂಘದ ಮೋಹನ್ ಅವರುಗಳು ಉಪಸ್ಥಿತರಿದ್ದರು. ನಯನ ಮಹಿಳಾ ಸಂಘದ ಅಧ್ಯಕ್ಷೆ ಎಂ.ಎ. ರುಬೀನಾ, ಉಪಾಧ್ಯಕ್ಷೆ ಎಸ್. ಸೆಲ್ವಿ, ಕಾರ್ಯದರ್ಶಿ ವಿದ್ಯಾ, ಖಜಾಂಚಿ ರುಕ್ಮಿಣಿ ಸೇರಿದಂತೆ 6 ಮಂದಿ ಕಾರ್ಯಕಾರಿ ಮಂಡಳಿ ಸದಸ್ಯರುಗಳಿಗೆ ಗುರುತಿನ ಚೀಟಿ ನೀಡಲಾಯಿತು.