ಕೂಡಿಗೆ, ನ. 10: ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡುಮಂಗಳೂರು ಗ್ರಾಮಗಳಲ್ಲಿ ಕಾರ್ತಿಕ ಮಾಸದ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.

ಮೊದಲ ದಿನದ ನರಕ ಚತುರ್ದಶಿ ಹಾಗೂ ಎರಡನೇ ದಿನ ಲಕ್ಷೀ ಪೂಜೆ, 3ನೇ ದಿನ ಬಲಿಪಾಡ್ಯಮಿ, ಗೋ ಪೂಜೆ ಸಂಪ್ರದಾಯದಂತೆ ನಡೆದವು. ದೀಪಾವಳಿ ಅಂಗವಾಗಿ ಅಯಾ ಗ್ರಾಮಸ್ಥರು ತಮ್ಮ ಗೋವುಗಳನ್ನು ಸ್ನಾನ ಮಾಡಿಸಿ, ಅಲಂಕರಿಸಿ ಪೂಜಿಸಲಾಯಿತು. ಅಲ್ಲದೆ ವಿದ್ಯುತ್ ದೀಪಗಳಿಂದ ಗ್ರಾಮವೇ ಅಲಂಕಾರಗೊಂಡಿತು. ಈ ಸಂದರ್ಭ ಅಯಾ ಗ್ರಾಮದಲ್ಲಿ ಕಾರ್ತಿಕ ಮಾಸದಲ್ಲಿ ಒಂದು ತಿಂಗಳವರೆಗೂ ನಡೆಯುವ ಕಾರ್ತಿಕ ಪೂಜೆ ಪ್ರಾರಂಭಗೂಂಡಿತು.