ಸೋಮವಾರಪೇಟೆ, ನ. 10: ಇಲ್ಲಿನ ಬಸವೇಶ್ವರ ಯುವಕ ಸಂಘದ ಅಧ್ಯಕ್ಷರಾಗಿ ಬಿ.ಎಲ್. ಸಂಗಮೇಶ್, ಕಾರ್ಯದರ್ಶಿ ಯಾಗಿ ಎಸ್.ಎಸ್. ಮಲ್ಲಿಕಾರ್ಜುನ ಆಯ್ಕೆಯಾಗಿದ್ದಾರೆ. ಬಸವೇಶ್ವರ ದೇವಾಲಯದಲ್ಲಿ ಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಉಪಾಧ್ಯಕ್ಷರಾಗಿ ಕೆ.ಎ. ಸಾಗರ್, ಖಜಾಂಚಿಯಾಗಿ ಎಸ್.ಎಂ. ಕುಮಾರ್, ನಿರ್ದೇಶಕರುಗಳಾಗಿ ಎಸ್.ಬಿ. ಅರುಣ್ ಕುಮಾರ್, ಎಸ್.ಕೆ. ಮಲ್ಲಿಕಾರ್ಜುನ, ಕೆ.ಎಸ್. ದಿಗಂತ, ಎಂ.ಪಿ. ವಿರೇಶ್, ಎಂ.ಎನ್. ರಮೇಶ, ವೈ.ಬಿ. ಮೂರ್ತಿ, ಬಿ.ಆರ್. ಯೋಗೇಶ್ ನೇಮಕಗೊಂಡಿದ್ದಾರೆ.