ಮಡಿಕೇರಿ, ನ. 9: ‘ಬೇಡವೇ ಬೇಡ ಟಿಪ್ಪು ಜಯಂತಿ..., ಧರ್ಮ ವಿರೋಧಿ ಸರಕಾರಕ್ಕೆ ಧಿಕ್ಕಾರ..., ಟಿಪ್ಪು ಅನುಯಾಯಿ ಸಿದ್ದರಾಮಯ್ಯಗೆ ಧಿಕ್ಕಾರ..., ಜನರ ಭಾವನೆಗೆ ಧಕ್ಕೆ ತಂದ ಸರಕಾರಕ್ಕೆ ಧಿಕ್ಕಾರ...’ ಎಂಬಿತ್ಯಾದಿ ಘೋಷಣೆಗಳು ಜಿಲ್ಲಾಡಳಿತ ಭವನದೆದು ರಲ್ಲಿಂದು ಮಾರ್ದ ನಿಸಿದವು. ಟಿಪ್ಪು ಜನ್ಮದಿನಾಚರಣೆ ವಿರೋಧಿ ಸಮಿತಿ ವತಿಯಿಂದ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ರಾಜ್ಯ ಸರಕಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆಕ್ರೋಶದ ನುಡಿಗಳು ಕೇಳಿಬಂದವು. ಟಿಪ್ಪು ಜಯಂತಿಯನ್ನು ವಿರೋಧಿಸುವ ದರೊಂದಿಗೆ ನಾಡಿನ ಜನತೆ ಸ್ವಯಂ ಘೋಷಿತ ಬಂದ್ ಆಚರಿಸು ವಂತೆ ಹಿಂದೂ ಸಂಘಟನೆಗಳ ಪ್ರಮುಖರು ಕರೆ ನೀಡಿದರು.ನಿಲ್ಲಿಸುವವರೆಗೆ ಹೋರಾಟ

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಆರ್.ಎಸ್.ಎಸ್.ನ ಹಿರಿಯ ಮುಖಂಡರಾದ ಮಚ್ಚಾರಂಡ ಮಣಿ ಕಾರ್ಯಪ್ಪ ಅವರು ಸ್ವಾಭಿಮಾನಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟುಮಾಡಿರುವ ಕ್ರೂರ ಆಡಳಿತಗಾರನಾಗಿ ಸಹಸ್ರಾರು ಮಂದಿಯ ಹತ್ಯೆಗೆ ಕಾರಣನಾದÀ ಟಿಪ್ಪು ಸುಲ್ತಾನನ ಜಯಂತಿಯನ್ನು ಸರಕಾರದ ಮುಖೇನ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಆಚರಿಸಲ್ಪಡು ತ್ತಿರುವದು ವೋಟ್‍ಬ್ಯಾಂಕ್ ತಂತ್ರವಾಗಿದೆ. ಈ ಜಯಂತಿಯನ್ನು ದೇಶಭಕ್ತರ ಮೇಲೆ ಹೇರುತ್ತಿರುವದು ಸರಿಯಲ್ಲವೆಂದರು. ಸತ್ಯ ಹೇಳುವವರ ಮೇಲೆ ಮೊಕದ್ದಮೆ ಹೂಡುವ ಕಾರ್ಯವಾಗುತ್ತಿದೆ. ಯಾವದೇ ಬೆದರಿಕೆಗಳಿಗೆ ಜಗ್ಗುವದಿಲ್ಲ. ಡೋಂಗಿ ವಿಚಾರವಾದಿಗಳ ಆಟ ಮುಗಿದಿದೆ. ಧರ್ಮ ಸ್ಥಾಪನೆ ಮಾಡಿಯೇ ಮಾಡು ತ್ತೇವೆ. ಟಿಪ್ಪು ಜಯಂತಿ ಆಚರಣೆ ನಿಲ್ಲಿಸುವವರೆಗೂ ಹೋರಾಟ ಮಾಡುವದಾಗಿ ಹೇಳಿದರು.

ಸ್ವಯಂ ಪ್ರೇರಿತ ಬಂದ್

ಟಿಪ್ಪು ಕೊಡಗು ಜಿಲ್ಲೆಯ ಜನತೆಯ ಮೇಲೆಸಗಿದ ಕ್ರೌರ್ಯ, ದೌರ್ಜನ್ಯ, ಅತ್ಯಾಚಾರ, ಅನಾಚಾರಗಳ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದೇವೆಯೇ ಹೊರತು ಬೇರೆ ಉದ್ದೇಶವಿಲ್ಲ; ಟಿಪ್ಪು ಜಯಂತಿ ವಿರೋಧಿಸಿ ಜಿಲ್ಲೆಯಾದ್ಯಂತ ಸ್ವಯಂ ಪ್ರೇರಿತ ಬಂದ್‍ಗೆ ಕರೆ ನೀಡಿದ್ದೇವೆಯೇ ಹೊರತು ಯಾರ ಮೇಲೆಯೂ ಒತ್ತಡ ಹೇರುತ್ತಿಲ್ಲ. ಆದರೆ ಸರಕಾರದ ಬೆಂಬಲದಿಂದ ಹಿಂದೂ ವಿರೋಧಿ ಸಂಘಟನೆಯೊಂದು

(ಮೊದಲ ಪುಟದಿಂದ) ಮುಚ್ಚಿದ ಅಂಗಡಿಗಳನ್ನು ಬಲವಂತವಾಗಿ ತೆರೆಯುವದಾಗಿ ಹೇಳಿದೆ. ಪೊಲೀಸರು ಅಂತಹವರನ್ನು ಬಂಧಿಸಿ ಕ್ರಮ ಕೈಗೊಳ್ಳಲಿ. ಬಂದ್ ಮಾಡುವವರ ಮೇಲೆ ಅಲ್ಲವೆಂದು ಟಿಪ್ಪು ಜಯಂತಿ ವಿರೋಧಿ ಸಮಿತಿ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದರು. ಪೊಲೀಸರ ಮೇಲೆ ಗೌರವವಿದೆ. ಆದರೆ ಇಂತಹ ಬೆದರಿಕೆಗಳಿಗೆ ಜಗ್ಗುವದಿಲ್ಲ. ಈಗಾಗಲೇ ವಿಕೋಪದಿಂದ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಜಯಂತಿ ಬೇಕಾ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಟಿಪ್ಪು ಯಾರೆಂದೇ ಗೊತ್ತಿಲ್ಲ. ಸ್ವಾತಂತ್ರ್ಯ ಹೋರಾಟಗಾರನೆಂದು ಬಿಂಬಿಸಿದ್ದಾರೆ. ಟಿಪ್ಪು ಜಯಂತಿಯನ್ನು ವಿರೋಧಿಸಿಯೇ ತೀರುತ್ತೇವೆ ಎಂದು ಮುನ್ನೆಚ್ಚರಿಕೆಯಿತ್ತರು.

ಜಯಂತಿ ಅಗತ್ಯವಿಲ್ಲ

ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಕೊಡವರನ್ನು ಸೋಲಿಸಲು ಸಾಧ್ಯವಾಗದಿದ್ದಾಗ ದೇವಾಟ್‍ಪರಂಬ್‍ನಲ್ಲಿ ಮೋಸದಿಂದ ಹತ್ಯೆಗೈದುದನ್ನು, ದೇವಾಲಯಗಳನ್ನು ನಾಶಪಡಿಸಿದ್ದುದನ್ನು ಮರೆಯಲಾಗದು. ಕೊಡಗು ದೇಶಭಕ್ತರ ನಾಡಾಗಿದ್ದು, ಇಂತಹ ನಾಡಿಗೆ ಈ ಜಯಂತಿ ಅವಮಾನ, ಜಯಂತಿ ಅಗತ್ಯವಿಲ್ಲವೆಂದು ಹೇಳಿದರು.

ಪ್ರಮುಖರಾದ ರವಿಕುಶಾಲಪ್ಪ, ಎಸ್.ಜಿ. ಮೇದಪ್ಪ, ಬಿ.ಬಿ. ಭಾರತೀಶ್, ಮನುಮುತ್ತಪ್ಪ, ಬಿ.ಎ. ಹರೀಶ್, ಕಾಳನ ರವಿ, ಕೆ.ಹೆಚ್. ಚೇತನ್, ಮಹೇಶ್ ಜೈನಿ, ರಾಬಿನ್ ದೇವಯ್ಯ, ಬಾಲಚಂದ್ರ ಕಳಗಿ, ಅನಿತಾ ಪೂವಯ್ಯ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.