ಗೋಣಿಕೊಪ್ಪ ವರದಿ, ನ. 9: ವಿದ್ಯುತ್ ಟ್ರಾನ್ಸ್‍ಫಾರಂ ಮೇಲೆ ಒಣಗಿದ ತೆಂಗಿನ ಮರದ ಗರಿ ಬಿದ್ದು ಹೊತ್ತಿಕೊಂಡಿದ್ದ ಬೆಂಕಿಯನ್ನು ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು. ಇಲ್ಲಿನ ಬೈಪಾಸ್ ರಸ್ತೆಯ ಸಮೀಪವಿರುವ ಟ್ರಾನ್ಸ್‍ಫಾರಂ ಮೇಲೆ ಮಧ್ಯಾಹ್ನ ತೆಂಗಿನ ಗರಿ ಬಿದ್ದು ಬೆಂಕಿ ಹೊತ್ತಿಕೊಂಡಿತು. ವಿದ್ಯುತ್ ಕಡಿತಗೊಂಡ ಕಾರಣ ಹೆಚ್ಚಿನ ಅನಾಹುತ ತಪ್ಪಿದಂತಾಯಿತು. ಬೆಂಕಿ ಸುತ್ತಲೂ ಆವರಿಸುವ ಮುನ್ನ ಅಗ್ನಿಶಾಮಕ ದಳ ಸಿಬ್ಬಂದಿ ತೆರಳಿ ಬೆಂಕಿ ನಂದಿಸಿದರು. ಸಮೀಪದಲ್ಲಿ ವಾಹನಗಳು ನಿಂತಿದ್ದರಿಂದ ಅನಾಹುತ ತಪ್ಪಿಸಿದರು. ಗೋಣಿಕೊಪ್ಪ ಅಗ್ನಿಶಾಮಕ ದಳ ಠಾಣಾಧಿಕಾರಿ ಕೆ.ಕೆ. ಕಾಳಪ್ಪ ಹಾಗೂ ಸಿಬ್ಬಂದಿ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದರು.