ವೀರಾಜಪೇಟೆ ನ. 9: ಆದಿ ಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 150ನೇ ಹುಟ್ಟು ಹಬ್ಬ ಹಾಗೂ 75ನೇ ಪುಣ್ಯ ದಿನಾಚರಣೆ ಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಅತ್ತೂರು ಗ್ರಾಮದ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ವಿರಾಜಪೇಟೆಯ ತೂಕು ಬೊಳಕು ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ, ಸಂಯುಕ್ತ ಆಶ್ರಯದಲ್ಲಿ ತಾ. 21 ರಂದು ಬೆಳಿಗ್ಗೆ 10.30 ಕ್ಕೆ ನ್ಯಾಷನಲ್ ಅಕಾಡೆಮಿ ಶಾಲೆ ಗೋಣಿಕೊಪ್ಪ ಬಳಿಯ ಅತ್ತೂರುವಿನಲ್ಲಿ ಆಯೋಜಿಸಲಾಗಿದೆ ಎಂದು ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ಹಾಗೂ ಅಪ್ಪಚ್ಚ ಕವಿ ಪ್ರತಿಮೆ ಸ್ಥಾಪಕ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಂಕರಿ ಪೊನ್ನಪ್ಪ ಅವರು, ಅಂದು ಬೆಳಿಗ್ಗೆ ವೀರಾಜ ಪೇಟೆಯ ದೊಡ್ಡಟ್ಟಿ ಚೌಕಿಯಲ್ಲಿರುವ ಹರದಾಸ ಅಪ್ಪಚ್ಚ ಕವಿಯ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಇದರ ಸಾರಥ್ಯವನ್ನು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ವಹಿಸಲಿದ್ದಾರೆ. ಕಾರ್ಯಕ್ರಮದ ಮುಂದಾಳತ್ವವನ್ನು ಪ.ಪಂ. ಸದಸ್ಯೆ ಮನೆಯಪಂಡ ದೇಚಮ್ಮ ವಹಿಸಲಿದ್ದಾರೆ. ನಂತರ ವಿರಾಜಪೇಟೆಯಿಂದ ಗೋಣಿಕೊಪ್ಪದ ಅತ್ತೂರು ನ್ಯಾಷನಲ್ ಶಾಲೆಯವರಗೆ ನಡೆಯವ ವಾಹನ ಜಾಥಾಕ್ಕೆ ನಂಜರಾಯಪಟ್ಟಣದ ವಿ.ಎಸ್. ಎಸ್.ಎನ್ ಅಧ್ಯಕ್ಷ ಬಲ್ಲಡಿಚಂಡ ಮುರಳಿ ಚಾಲನೆ ನೀಡಲಿದ್ದಾರೆ.. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪಿ.ಕೆ. ಪೊನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇ ಸಂದರ್ಭ ಜಿಲ್ಲಾಧಿಕಾರಿ ಶ್ರೀವಿದ್ಯಾ ಅಪ್ಪನೆರವಂಡ ಕುಂಞಪ್ಪ ದ್ವಾರದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಅತ್ತೂರು ನ್ಯಾಷನಲ್ ಶಾಲೆ ಸಭಾಂಗಣದಲ್ಲಿ ನಡೆಯುವ ಸಭಾ ವೇದಿಕೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವೆ ಜಯಮಾಲ ಉದ್ಘಾಟಿಸಲಿದ್ದಾರೆ. ನಂತರ ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ವಿ.ಪೇ ಹಾಗೂ ಅಪ್ಪಚ್ಚ ಕವಿ ಪ್ರತಿಮೆ ಸ್ಥಾಪಕ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಇದರ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ, ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್, ವೀರಾಜಪೇಟೆ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಉಮೇಶ್ ಕೇಚಮಯ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮತ್ತು ಮಕ್ಕಳಿಂದ ಉಮ್ಮತ್ತಾಟ್, ಬೊಳಕಾಟ್,

ವಾಲಗತಾಟ್, ದುಡಿಕೊಟ್ಟ್ ಪಾಟ್ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಕೆ. ಪೊನ್ನಪ್ಪ ಮಾತನಾಡಿ, ಪ್ರಕೃತಿ ವಿಕೋಪದ ಅನಾಹುತದ ಕಾರಣ ಯಾವದೇ ಸಮಾರಂಭವನ್ನು ಆಯೋಜಿ ಸಲು ಸಾಧ್ಯವಾಗುತ್ತಿಲ್ಲ.

ಆದರೆ ತೂಕ್ ಬೊಳಕ್‍ನವರ ಕೋರಿಕೆಯಂತೆ ಸಹಕಾರ ನೀಡಿದ್ದೇವೆ. ಇದೇ ಸಮಾರಂಭದಲ್ಲಿ ಅಕಾಡೆಮಿ ವತಿಯಿಂದ ಎರಡು ಪುಸ್ತಕಗಳನ್ನು ಬಿಡುಗಡೆ ಗೊಳಿಸಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಉಮೇಶ್ ಕೇಚಮಯ್ಯ , ನ್ಯಾಷನಲ್ ಅಕಾಡೆಮಿ ಶಾಲೆಯ ಡೀನ್ ಅಪ್ಪನೆರವಂಡ ಶಾಂತಿ ಅಚ್ಚಪ್ಪ , ಹಾಗೂ ಪುಲಿಯಂಡ ಪೊನ್ನಪ್ಪ ಉಪಸ್ಥಿತರಿದ್ದರು.