ಮಡಿಕೇರಿ, ನ. 5: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯು ಸಂಪನ್ಮೂಲ ವ್ಯಕ್ತಿಗಳ ತರಬೇತಿ ಮತ್ತು ಆಯ್ಕೆಗಾಗಿ ಅರೆಬಾಸೆ ಲಿಪಿ, ವ್ಯಾಕರಣ ಮತ್ತು ಸಾಹಿತ್ಯ ಕಾರ್ಯಾಗಾರವನ್ನು ನಡೆಸಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ಕೊಡಗು ಜಿಲ್ಲೆಯ ಕರಿಕೆ, ಸಂಪಾಜೆ, ಪೆರಾಜೆ ಮತ್ತು ಕೇರಳ ರಾಜ್ಯದ ಕಲ್ಲಪಳ್ಳಿ, ಬಂದಡ್ಕ, ದೇಲಂಪಾಡಿ ಸೇರಿದಂತೆ ಸುಳ್ಯವನ್ನು ಕೇಂದ್ರೀಕರಿಸಿಕೊಂಡು ಸ್ಥಳೀಯವಾಗಿ ತರಬೇತು ಕಾರ್ಯಾಗಾರಗಳನ್ನು ಕಲಿಕಾ ಕೇಂದ್ರಗಳನ್ನು ನಡೆಸಲು ನಿರ್ಧರಿಸಲಾಗಿದೆ. ಸಾಕ್ಷರತಾ ಆಂದೋಲನದ ರೀತಿಯಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಯಲ್ಲಿ ಅರೆಬಾಸೆ ಲಿಪಿ, ವ್ಯಾಕರಣ ಕಲಿಕಾ ಯೋಜನೆಯಲ್ಲಿ ತರಬೇತುದಾರರು, ಸಂಪನ್ಮೂಲ ವ್ಯಕ್ತಿಗಳಾಗಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ನಿರ್ವಹಿಸಲು ಆಸಕ್ತರಿಂದ ಅರ್ಜಿ ನಿರೀಕ್ಷಿಸಲಾಗಿದೆ. ಸ್ಥಳೀಯ ಶಿಕ್ಷಣ ಸಂಸ್ಥೆ ಯುವಕ-ಯುವತಿ ಮಂಡಲ ಸೇರಿದಂತೆ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘಗಳ ಸಹಬಾಗಿತ್ವವನ್ನು ಅಕಾಡೆಮಿ ಬಯಸುತ್ತದೆ. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ತರಬೇತುದಾರರಾಗಿ ಅಯ್ಕೆಯಾದ ವರಿಗೆ ಅಕಾಡೆಮಿಯಿಂದ ಸೂಕ್ತ ಸಂಭಾವನೆ ನೀಡಲಾಗುವದು ಆಸಕ್ತರು ಹೆಚ್ಚಿನ ವಿವರಗಳಿಗೆ ಅಕಾಡೆಮಿ ಸದಸ್ಯ ಎ.ಕೆ. ಹಿಮಕರ (ಮೊ.ನಂ. 9481267121) ರವರನ್ನು ಅಥವಾ ಅಕಾಡೆಮಿಯ ಕಚೇರಿ (ದೂ. 08272-223055)ನ್ನು ಸಂಪರ್ಕಿಸಬಹುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ತಿಳಿಸಿದ್ದಾರೆ.