ಚೆಟ್ಟಳ್ಳಿ, ನ. 5: ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಕ್ಕಳ ಸಹಾಯವಾಣಿಯಿಂದ ಬಂದ ದೂರಿನ ಮೇರೆಗೆ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಇವರ ನೇತೃತ್ವದಲ್ಲಿ ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ, ಕಾಟ್ರಕೊಲ್ಲಿ ಹಾಗೂ ಹರಿಹರ ಬೆಳ್ಳೂರುಗಳಲ್ಲಿ ಬಾಲ ಕಾರ್ಮಿಕ ಹಾಗೂ ಕಿಶೋರವಸ್ಥೆ ಕಾರ್ಮಿಕ ಕಾಯ್ದೆ 1986ರಡಿ ಅನಿರೀಕ್ಷಿತ ಧಾಳಿ ಹಾಗೂ ಜನಜಾಗೃತಿ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಯಿತು.
ಈ ಸಂದರ್ಭ ತೋಟದ ಮಾಲೀಕರಿಗೆ ಹಾಗೂ ಸ್ಥಳೀಯ ವಿವಿಧ ಸಂಸ್ಥೆಗಳಿಗೆ ತೆರಳಿ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಮಕ್ಕಳನ್ನು ಯಾವದೇ ಕಾರಣಕ್ಕೂ ಕೆಲಸಕ್ಕೆ ನೇಮಿಸಿಕೂಳ್ಳಬಾರದು, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ದಾಖಲಿಸ ಬೇಕು; ಮಕ್ಕಳನ್ನು ಕೆಲಸಕ್ಕೆ ನೇಮಿಸಿ ಕೊಂಡಲ್ಲಿ ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ ಎಂದು ಎಚ್ಚರಿಸ ಲಾಯಿತು.
ಈ ಸಂದರ್ಭ ಯೋಜನಾ ನಿರ್ದೇಶಕ ಆರ್. ಶೀರಾಝ್ ಅಹ್ಮದ್, ಹಿರಿಯ ಕಾರ್ಮಿಕ ನಿರೀಕ್ಷಕ ಮಹದೇವಸ್ವಾಮಿ, ಪೊಲೀಸ್ ಇಲಾಖೆಯ ಸುಮತಿ, ಸ್ವಾಮಿ ಕೆ. ಕೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಿರಣ್ ಐ ಎನ್, ಶಿಕ್ಷಣ ಇಲಾಖೆಯ ಯಲ್ಲಪ್ಪ, ಮಕ್ಕಳ ಸಹಾಯವಾಣಿಯ ಪ್ರವೀಣ್ ಹಾಗೂ ಕುಸುಮ ಉಪಸ್ಥಿತರಿದ್ದರು.