ವೀರಾಜಪೇಟೆ, ನ. 5: ಕುಕ್ಲೂರುವಿನಲ್ಲಿರುವ ತಾತಂಡ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ವೀರಾಜಪೇಟೆ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕಗೊಂಡ ಎನ್.ಕೆ. ಜ್ಯೋತಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಅಧ್ಯಕ್ಷೆ ತಾತಂಡ ಗಂಗೆ ಪೊನ್ನಪ್ಪ, ಕಾರ್ಯದರ್ಶಿ ರಾಣಿ ಅಪ್ಪಣ್ಣ ಮತ್ತು ಖಜಾಂಚಿ ಕವಿ ಬಿಪಿನ್ ಹಾಗೂ ಒಕ್ಕೂಟದ ಎಲ್ಲಾ ಮಹಿಳಾ ಸದಸ್ಯರು ಹಾಜರಿದ್ದರು.

ಒಕ್ಕೂಟದ ವಾರ್ಷಿಕ ವರದಿಯನ್ನು ಪ್ರಭಾ ನಾಣಯ್ಯ ವಾಚಿಸಿ, ಚಾಂದ್ ದಿಲೀಪ್ ಅವರು ಸನ್ಮಾನಿತರ ಪರಿಚಯ ಮಾಡಿದರು. ತಾತಂಡ ಶರ್ಲಿ ಬೆಳ್ಯಪ್ಪ ಪ್ರಾರ್ಥಿಸಿದರೆ, ರಾಣಿ ಅಪ್ಪಣ್ಣ ಸ್ವಾಗತಿಸಿ ಯೆಶು ಕಬೀರ್ ವಂದಿಸಿದರು.

ಇದೇ ಸಂದರ್ಭ ಮಕ್ಕಳಿಗೆ ವಿವಿಧ ರೀತಿಯ ಸಾಂಸ್ಕøತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸಲಾಯಿತು.