ಭಾಗಮಂಡಲ, ನ. 5: ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ಭಗವತಿ ದೇವಾಲಯದ ಭಂಡಾರ ಡಬ್ಬಿಯ ಬೀಗ ಮುರಿದು ಅಂದಾಜು 15000 ನಗದು ದೋಚಿ ಪರಾರಿಯಾಗಿದ್ದು ಈ ಘಟನೆ ನಿನ್ನೆ ಸಂಜೆ 4 ಗಂಟೆಗೆ ಆರ್.ಎಕ್ಸ್. ಬೈಕ್‍ನಲ್ಲಿ 3 ಜನ ದುಷ್ಕರ್ಮಿಗಳು ಬಂದಿರುವ ಶಂಕೆಯಿದೆ. ಈ ಸಂಬಂಧ ದೇವಸ್ಥಾನದ ಆಡಳಿತ ಮಂಡಳಿಯವರು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.