ವೀರಾಜಪೇಟೆ, ನ. 6: ತಾ. 10 ರಂದು ಸರ್ಕಾರ ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿಯನ್ನು ವೀರಾಜಪೇಟೆ ಕೋಡವ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಸಮಾಜ ಅಧ್ಯಕ್ಷ ವಾಂಚಿರ ನಾಣಯ್ಯ ಹೇಳಿದರು.

ಪತ್ರಿಕೆಗೆ ಲಿಖಿತ ಹೇಳಿಕೆ ನೀಡಿ ಈಗಾಗಲೆ ಕೊಡಗು ಜಿಲ್ಲೆ ಪ್ರಕೃತಿ ವಿಕೋಪದಿಂದ ತತ್ತರಿಸಿ ಹೋಗಿದೆ. ಮುಸ್ಲಿಂ ಜನಾಂಗಕ್ಕೆ ಬೇಡವಾದ ವಿವಾದಿತ ಜಯಂತಿಯನ್ನು ಆಚರಿಸಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ. ಒಂದು ವರ್ಗವನ್ನು ಓಲೈಸುವ ಉದ್ದೇಶದಿಂದ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿರುವ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುವದಲ್ಲದೆ ಟಿಪ್ಪು ಜಯಂತಿಯಿಂದ ಏನಾದರು ಅನಾಹುತಗಳು ಸಂಭವಿಸಿದರೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಹೇಳಿದರು.