ಗೋಣಿಕೊಪ್ಪ ವರದಿ, ನ. 4: ಕ್ಷೀರಭಾಗ್ಯ ಯೋಜನೆಯನ್ನು ವಿಶೇಷ ಚೇತನ ಮಕ್ಕಳಿಗೂ ವಿಸ್ತರಿಸುವ ಸರ್ಕಾರದ ಯೋಜನೆಯನ್ನು ಪಾಲಿಬೆಟ್ಟ ಚೆಷೈರ್‍ಹೋಂ ಇಂಡಿಯಾ ಕೂರ್ಗ್ ಶಾಲೆಯ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ ಮೂಲಕ ಅನುಷ್ಠಾನಗೊಳಿಸಲಾಯಿತು.
ಅಕ್ಷರದಾಸೋಹ ಅಧಿಕಾರಿ ಹೆಚ್.ಕೆ. ಪಾಂಡು, ನೋಡೆಲ್ ಅಧಿಕಾರಿ ಕೃಷ್ಣಪ್ಪ, ಚೆಷೈರ್ ಹೋಂ ಆಡಳಿತ ಮಂಡಳಿ ಅಧ್ಯಕ್ಷೆ ಗೀತಾ ಚೆಂಗಪ್ಪ ಚಾಲನೆ ನೀಡಿದರು.
ಈ ಸಂದರ್ಭ ನಿರ್ದೇಶಕಿ ಕೂತಂಡ ಬೋಜಮ್ಮ, ಮುಖ್ಯ ಶಿಕ್ಷಕ ಶಿವರಾಜ್, ಪಾಲಿಬೆಟ್ಟ ಗ್ರಾ.ಪಂ. ಪಿಡಿಒ ಅಬ್ದುಲ್ಲಾ, ಸಿಆರ್‍ಪಿ ಕರುಂಬಯ್ಯ ಉಪಸ್ಥಿತರಿದ್ದರು.