ಕೂಡಿಗೆ, ನ. 4: ಜೀವ ವಿಮೆ ಎಂಬದು ಮನುಷ್ಯನ ಮರಣದ ನಂತರ ಅವರನ್ನೇ ನಂಬಿರುವ ಕುಟುಂಬಸ್ಥರಿಗೆ ಅನುಕೂಲಕರ ವಾಗುವ ನಿಟ್ಟಿನಲ್ಲಿ ಆರ್ಥಿಕ ಸಹಾಯ ಪಡೆಯುವಂತಹ ಯೋಜನೆ ಯಾಗಿದ್ದು, ಕೇವಲ ಪ್ರತಿನಿತ್ಯ ಒಂದು ಟೀ-ಕಾಫಿ ಕುಡಿಯುವ ಮೊತ್ತಕ್ಕೆ ಈ ಜೀವ ವಿಮೆಯು ಸಮವಾಗಿದ್ದು ವಾರ್ಷಿಕವಾಗಿ ಕೇವಲ 12 ರೂಪಾಯಿ ಹಾಗೂ 345 ರೂಪಾಯಿಗಳ ಪಾವತಿಯಿಂದಾಗಿ ಮನುಷ್ಯನ ಮರಣದ ನಂತರ ಆತನ ಕುಟುಂಬದವರಿಗೆ ನೆರವಾಗುವಂತಹ ಮತ್ತು ಆರ್ಥಿಕ ಬಲ ತುಂಬುವಂತಹ ಯೋಜನೆ ಇದಾಗಿದೆ ಎಂದು ಕಾವೇರಿ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ ಶೆಟ್ಟಿ ಹೇಳಿದರು.

ಹೆಬ್ಬಾಲೆ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕ್‍ನ ಆರನೇ ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಆರ್ಥಿಕ ಸಾಕ್ಷರತೆಯ ಅರಿವು ಕಾರ್ಯಕ್ರಮ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾವೇರಿ ಗ್ರಾಮೀಣ ಬ್ಯಾಂಕ್ ಹಾಗೂ ನಬಾರ್ಡ್ ಸಹಯೋಗದೊಂದಿಗೆ ಆರ್ಥಿಕ ಸುರಕ್ಷತೆಯ ಅರಿವು ಕಾರ್ಯಕ್ರಮವನ್ನು ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯ ಫಲಾನುಭವಿಗಳಿಗೆ ಜೀವ ವಿಮೆಯ ಚೆಕ್ ಅನ್ನು ವಿತರಿಸುವ ಕಾರ್ಯಕ್ರಮವನ್ನು ಹಾಗೂ ಆರ್ಥಿಕ ಸಾಕ್ಷರತೆಯ ಅರಿವು ಕಾರ್ಯಕ್ರಮ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾವೇರಿ ಗ್ರಾಮೀಣ ಬ್ಯಾಂಕ್ ಹಾಗೂ ನಬಾರ್ಡ್ ಸಹಯೋಗದೊಂದಿಗೆ ಆರ್ಥಿಕ ಸುರಕ್ಷತೆಯ ಅರಿವು ಕಾರ್ಯಕ್ರಮವನ್ನು ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯ ಫಲಾನುಭವಿಗಳಿಗೆ ಜೀವ ವಿಮೆಯ ಚೆಕ್ ಅನ್ನು ವಿತರಿಸುವ ಕಾರ್ಯಕ್ರಮವನ್ನು ದೊರಕಬಹುದಾದ ಜೀವ ವಿಮೆಯ ಸೌಲಭ್ಯವನ್ನು ಪ್ರತಿಯೊಬ್ಬರೂ ಪಡೆಯುವಂತಾಗಬೇಕು. ಮುಂದೆ ಅಂತಹ ಜೀವ ವಿಮೆಯಿಂದ ನಮ್ಮನ್ನೇ ನಂಬಿಕೊಂಡಿರುವ ಅಂತಹ ಕುಟುಂಬಸ್ಥರಿಗೆ ಅನುಕೂಲವಾಗುವ ಹಿತ ದೃಷ್ಟಿಯಿಂದ ಇಂದಿನಿಂದಲೇ ಎಲ್ಲರೂ ಜೀವ ವಿಮೆಯನ್ನು ಪಡೆಯುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜೀವ ವಿಮೆಯ ಫಲಾನುಭವಿಗಳಾದ ಮದಲಾಪುರದ ನಿವಾಸಿ ನಾರಾಯಣ ಹಾಗೂ ಹಳೆಗೋಟೆ ನಿವಾಸಿ ಶೋಭಾ ಸುರೇಶ್ ರವರಿಗೆ ತಲಾ 6 ಲಕ್ಷರೂಗಳ ಚೆಕ್ ಅನ್ನು ನೀಡಲಾಯಿತು. ಈ ಸಂದರ್ಭ ಕಾವೇರಿ ಗ್ರಾಮೀಣ ಬ್ಯಾಂಕ್‍ನ ವ್ಯವಸ್ಥಾಪಕ ಹೆಚ್.ಎಸ್. ಯುವರಾಜ್, ಸಿಬ್ಬಂದಿಗಳಾದ ನಯನ್ ನಾಯಕ್, ನವೀನ್ ಕೆ. ಮತ್ತು ರಾಜಮ್ಮ ಹಾಗೂ ಗ್ರಾಹಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.