ಗೋಣಿಕೊಪ್ಪ ವರದಿ: ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೆಪ್ಪುಡೀರ ಎಂ. ರಾಮಕೃಷ್ಣ, ಉಪಾಧ್ಯಕ್ಷರಾಗಿ ಪಾಲೇಂಗಡ ಮನು ನಂಜಪ್ಪ ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಸಂಘದ ಸಭಾಂಗಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇವರುಗಳು ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭ ಚೆಕ್ಕೇರ ಎಂ. ಅಚ್ಚಯ್ಯ, ಬೊಳ್ತಂಡ ಬಿ. ಚೆಂಗಪ್ಪ, ಮನೆಯಪಂಡ ಎಂ. ಮಹೇಶ್, ಎಸ್. ವಿ. ಚಂದ್ರಶೇಖರ್, ಕೆ. ಕೆ. ಪದ್ಮನಾಭ, ಹೆಚ್. ಬಿ. ಗಣೇಶ್, ಹೆಚ್. ಎಸ್. ಗೋವಿಂದ, ಹೆಚ್. ಡಿ. ಲಕ್ಷ್ಮಣ, ಜಿ.ಎಸ್. ಜಯಮ್ಮ, ಎಂ.ಎಸ್. ಮಂಜುಳ, ಎ. ಆರ್. ಸವಿತಾ ಆಯ್ಕೆಯಾದರು. ಚುನಾವಣಾಧಿಕಾರಿಗಳಾಗಿ ಪ್ರಭಾಕರ್ ಕಾರ್ಯನಿರ್ವಹಿಸಿದರು. ಈ ಸಂದರ್ಭ ಸಿಇಒ ಸುಬ್ರಮಣಿ ಉಪಸ್ಥಿತರಿದ್ದರು.

ಅ. 21 ರಂದು ಸಂಘದ 13 ಸ್ಥಾನಗಳಿಗೆ ನಡೆದ ಚುಣಾವಣೆಯಲ್ಲಿ ಬಿಜೆಪಿ ಬೆಂಬಲಿತರು ಪೂರ್ಣ ಪ್ರಮಾಣದಲ್ಲಿ ಚುನಾಯಿತರಾಗಿದ್ದರು.ಕೋಟೂರು: ಕೋಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆಯಲ್ಲಿ ಭಾಜಪ ಜಯಭೇರಿ ಬಾರಿಸಿದೆ.

ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಭಾಜಪ ಬೆಂಬಲಿತ ತಾಣಚಿರ ದೀಪಕ್, ದೇಯಂಡ ಅಯ್ಯಣ್ಣ, ಪೆಮ್ಮಂಡ ಭರತ್, ಅಜ್ಜಿಕುಟ್ಟಿರ ರೋಹಿಣಿ, ಚಂದ್ರ, ಶ್ಯಾಮಲಾ, ಮಾದಪ್ಪ, ರಾಮು ನಿರ್ದೇಶಕರಾಗಿ ಆಯ್ಕೆಯಾದರು.

ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷರಾಗಿ ದೇಯಂಡ ಅಯ್ಯಣ್ಣ, ತಾಣಚಿರ ದೀಪಕ್ , ಪೆಮ್ಮಂಡ ಭರತ್ ಕ್ರಮವಾಗಿ ಅಧಿಕಾರ ಚಲಾಯಿಸಲಿದ್ದಾರೆ.ಸುಂಟಿಕೊಪ್ಪ: ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಎ. ಮೊಣ್ಣಪ್ಪ 3ನೇ ಬಾರಿಗೆ ನೇಮಕಗೊಂಡರೆ, ಉಪಾಧ್ಯಕ್ಷರಾಗಿ ಪಿ.ಪಿ. ತಿಲಕ್ ಕುಮಾರ್ ದ್ವಿತೀಯ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಸಭಾಂಗಣದಲ್ಲಿ ಚುನಾವಣಾಧಿಕಾರಿಯಾಗಿದ್ದ ಮಾದಾಪುರ ಗ್ರಾ.ಪಂ. ಪಿ.ಡಿ.ಓ. ಸಂದೀಪ್ ಅವರು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆಸಿದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬೇರೆ ಯಾರೂ ನಾಮಪತ್ರ ಸಲ್ಲಿಸದೆ ಇರುವದರಿಂದ ಅವಿರೋಧವಾಗಿ ಅಧ್ಯಕ್ಷರಾಗಿ ಮೊಣ್ಣಪ್ಪ ಉಪಾಧ್ಯಕ್ಷರಾಗಿ ತಿಲಕ್ ಕುಮಾರ್ ಆಯ್ಕೆಯಾಗಿರುವದಾಗಿ ಚುನಾವಣಾಧಿಕಾರಿ ಘೋಷಿಸಿದರು

ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ನಾಪಂಡ ಉಮೇಶ್ ಉತ್ತಪ್ಪ, ಎನ್.ಸಿ. ಕಾಳಪ್ಪ (ಸಚ್ಚಿ), ಬೆಳ್ಯಪ್ಪ ಬಿ.ಎಂ. ಧೂಮಪ್ಪ, ಜೂಲಿ ಪೊನ್ನವ್ವ, ರೇಣುಕಮ್ಮ ಕೆ.ಆರ್., ಕೃಷ್ಣಪ್ಪ, ಸಿ.ಎ. ತಮ್ಮಯ್ಯ, ನಳಿನಿ ಪೆಮ್ಮಯ್ಯ, ಕೆ.ಎ. ಲತೀಫ್ ಹಾಗೂ ಎಂ.ವೈ. ಕೇಶವ, ಸಹಕಾರ ಸಂಘದ ಕಾರ್ಯನಿರ್ವಾಹಣಾಧಿಕಾರಿ ಬಿ.ಎಸ್. ಕಾವೇರಪ್ಪ ಉಪಸ್ಥಿತರಿದ್ದರು.ಮಡಿಕೇರಿ: ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಇತ್ತೀಚೆಗೆ ನಡೆಯಿತು. ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಬೆಂಬಲಿತ ಅಭ್ಯರ್ಥಿ ಬಾಚರಣಿಯಂಡ ಪಿ. ಸುಮನ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಪೊಡನೋಳನ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಯ್ಯಂಡ ಸತೀಶ್ ಬೆಳ್ಳಿಯಪ್ಪ, ಬಾಚರಣಿಯಂಡ ಗಣಪತಿ (ದಿನೇಶ್), ಕೂರನ ಕಿಶೋರ್‍ಕುಮಾರ್, ಕೇಕಡ ಸುಗುಣ, ಕೂರನ ಸುಶೀಲಾ, ಪಟ್ಟಮಾಡ ಲೈಲಾ, ಟಿ.ಎಸ್. ಚೇತಕ್, ಎನ್.ಸಿ. ಜೀವನ್, ಎ.ಎ. ದೇವಯ್ಯ, ಎಂ.ಕೆ. ವಸಂತ, ಸರಸು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.