ಮಡಿಕೇರಿ, ನ. 5: ಕರ್ನಾಟಕ ಸಹಕಾರ ಮಹಾಮಂಡಲ ಹಾಗೂ ಕೊಡಗು ಸಹಕಾರ ಒಕ್ಕೂಟ ಆಶ್ರಯದಲ್ಲಿ ತಾ. 9 ರಂದು ಬೆಳಿಗ್ಗೆ 10.30ಕ್ಕೆ ಹೊಟೇಲ್ ಕೂರ್ಗ್ ಇಂಟರ್ ನ್ಯಾಷನಲ್‍ನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಹಾಗೂ ‘ತ್ರೈಮಾಸಿಕ’ ಬಿಡುಗಡೆ ಜರುಗಲಿದೆ.
ಒಕ್ಕೂಟ ಅಧ್ಯಕ್ಷ ಮನುಮುತ್ತಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯ ಸಹಕಾರಿಗಳು, ಸ್ಥಳೀಯ ಸಂಸ್ಥೆ, ಕೇಂದ್ರ ಬ್ಯಾಂಕ್ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.