ಮಡಿಕೇರಿ, ಅ. 21: ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2018 ಪ್ರಕೃತಿ ವಿಕೋಪದಿಂದಾಗಿ ಮಧ್ಯಂತರದಲ್ಲಿ ಸ್ಥಗಿತಗೊಳಿಸಲಾಗಿದ್ದ, ಕೊಡಗು ಜಿಲ್ಲೆಯ ವೀರಾಜಪೇಟೆ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ಮುಂದುವರೆಸಲು ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ.
ಆ ದಿಸೆಯಲ್ಲಿ ತಾ. 17 ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆದಿದ್ದು, ತಾ. 28 ರಂದು ಮತದಾನ ಅವಶ್ಯವಿದ್ದರೆ, ಮತದಾನವು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ನಡೆಯಲಿದೆ. ತಾ. 30 ರಂದು ಮರು ಮತದಾನ ಇದ್ದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ. ತಾ. 31 ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾಯ ತಾಲೂಕು ಕೇಂದ್ರ ಸ್ಥಳದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಸೋಮವಾರಪೇಟೆ ಪ.ಪಂ.ಯಲ್ಲಿ 11 ವಾರ್ಡ್, ಕುಶಾಲನಗರ ಪ.ಪಂ.ಯಲ್ಲಿ 16 ವಾರ್ಡ್, ವೀರಾಜಪೇಟೆ ಪ.ಪಂ.ಯಲ್ಲಿ 18 ವಾರ್ಡ್ ಒಟ್ಟು 45 ವಾರ್ಡ್‍ಗಳಲ್ಲಿ ಚುನಾವಣೆ ನಡೆಯಲಿದೆ.
ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿ 2,562 ಪುರುಷ ಹಾಗೂ 2,699 ಮಹಿಳಾ ಮತದಾರರು ಒಟ್ಟು 5,261 ಮತದಾರರಿದ್ದಾರೆ. ಕುಶಾಲನಗರ ಪ.ಪಂ. ವ್ಯಾಪ್ತಿಯಲ್ಲಿ 5,899 ಪುರುಷ ಹಾಗೂ 5700 ಮಹಿಳಾ ಮತದಾರರು ಒಟ್ಟು 11,599 ಮತದಾರರಿದ್ದಾರೆ. ವೀರಾಜಪೇಟೆ ಪ.ಪಂ.ವ್ಯಾಪ್ತಿಯಲ್ಲಿ 6,998 ಪುರುಷ ಹಾಗೂ 6,925 ಮಹಿಳಾ ಮತದಾರರು, ಇತರೆ 3 ಒಟ್ಟು 13,926 ಮತದಾರರಿದ್ದಾರೆ. ಒಟ್ಟಾರೆ ಮೂರು ಪ.ಪಂ. ವ್ಯಾಪ್ತಿಯಲ್ಲಿ 15,459 ಪುರುಷರು ಹಾಗೂ 15,324 ಮಹಿಳೆಯರು ಹಾಗೂ 3 ಇತರೆ ಒಟ್ಟು 30,786 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‍ಗಳ ಮತದಾರರ ಮತ್ತು ಮತಗಟ್ಟೆಗಳ ವಿವರ: ಸೋಮವಾರಪೇಟೆ ಪ.ಪಂ.ವ್ಯಾಪ್ತಿಯಲ್ಲಿ 11 ಮತಗಟ್ಟೆಗಳು, ಕುಶಾಲನಗರ ಪ.ಪಂ.ವ್ಯಾಪ್ತಿಯಲ್ಲಿ 16 ಮತಗಟ್ಟೆ ಹಾಗೂ ವೀರಾಜಪೇಟೆ ಪ.ಪಂ. ವ್ಯಾಪ್ತಿಯಲ್ಲಿ 18 ಮತಗಟ್ಟೆಗಳು ಒಟ್ಟು 45 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಕೊಡಗು ಜಿಲ್ಲೆಯ ವೀರಾಜಪೇಟೆ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆಯನ್ನು ನಡೆಸಲು ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ.
ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಹೆಸರು ಮತ್ತು ಪದನಾಮದ ವಿವರ:-ಸೋಮವಾರಪೇಟೆ ಪ.ಪಂ.ನ 1 ರಿಂದ 11 ವಾರ್ಡ್‍ಗೆ ಚುನಾವಣಾಧಿಕಾರಿಯಾಗಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಪಿ.ಎಸ್.ಮಹೇಶ್ (9483100536), ಸಹಾಯಕ ಚುನಾವಣಾಧಿಕಾರಿ ಸೋಮವಾರಪೇಟೆ ಸಹಾಯಕ ತೋಟಗಾರಿಕೆ ಅಧಿಕಾರಿ ಎಚ್.ಪಿ.ಗಣೇಶ್ (9980311306),
ಕುಶಾಲನಗರ ಪ.ಪಂ. 1 ರಿಂದ 8 ವಾರ್ಡ್‍ಗೆ ಚುನಾವಣಾಧಿಕಾರಿ ಸೋಮವಾರಪೇಟೆ ಟೆಕ್ನೊಲಜಿ ಫಾರ್ಮ್ ಮಾದಾಪುರ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಮೋದ್ ಸಿ.ಎಂ. (9483110621), ಸಹಾಯಕ ಚುನಾವಣಾಧಿಕಾರಿಯಾಗಿ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರ.ದ.ಸ. ರಾಜೇಶ್ ಎಚ್.ಪಿ. (9480426663), 9 ರಿಂದ 16 ವಾರ್ಡ್‍ಗೆ ಚುನಾವಣಾಧಿಕಾರಿಯಾಗಿ ಮಡಿಕೇರಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ವರದರಾಜು (9980446951), ಸಹಾಯಕ ಚುನಾವಣಾಧಿಕಾರಿಯಾಗಿ ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಬಾಲಕೃಷ್ಣ ರೈ (9480843156).
ವೀರಾಜಪೇಟೆ ಪಟ್ಟಣ ಪಂಚಾಯಿತಿಯ 1 ರಿಂದ 9 ವಾರ್ಡ್‍ಗೆ ಚುನಾವಣಾಧಿಕಾರಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು (9845909114), ಸಹಾಯಕ ಚುನಾವಣಾಧಿಕಾರಿ ಪೊನ್ನಂಪೇಟೆ ತೋಟಗಾರಿಕೆ ಇಲಾಖೆಯ ತಾಳೆಬೆಳೆ ಯೋಜನೆಯ ಸಹಾಯಕ ತೋಟಗಾರಿಕೆ ಅಧಿಕಾರಿ ಎಚ್.ಎನ್. ನಟೇಶ್ ಕುಮಾರ್ (9986638205), 10 ರಿಂದ 18 ವಾರ್ಡ್‍ಗೆ ಚುನಾವಣಾಧಿಕಾರಿಯಾಗಿ ವೀರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಚಾಲ್ರ್ಸ್ ಡಿಸೋಜಾ (9741535835) ಹಾಗೂ ಸಹಾಯಕ ಚುನಾವಣಾಧಿಕಾರಿ ವೀರಾಜಪೇಟೆ ಸಹಾಯಕ ತೋಟಗಾರಿಕೆ ಅಧಿಕಾರಿ ಶಿವರಾಜು (8904673536). ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾಧಿಕಾರಿ/ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಸೋಮವಾರಪೇಟೆ ಪ.ಪಂ.ಗೆ 11 ವಾರ್ಡ್‍ಗೆ ಒಬ್ಬ ಚುನಾವಣಾಧಿಕಾರಿ, ಒಬ್ಬ ಸಹಾಯಕ ಚುನಾವಣಾಧಿಕಾರಿ,
ಕುಶಾಲನಗರ ಪ.ಪಂ.ವ್ಯಾಪ್ತಿಗೆ 16 ವಾರ್ಡ್‍ಗೆ 2 ಚುನಾವಣಾಧಿಕಾರಿಗಳು ಮತ್ತು 2 ಸಹಾಯಕ ಚುನಾವಣಾಧಿಕಾರಿ, ವೀರಾಜಪೇಟೆ ಪ.ಪಂ. ವ್ಯಾಪ್ತಿಗೆ 18 ವಾರ್ಡ್‍ಗೆ 2 ಚುನಾವಣಾಧಿಕಾರಿ ಹಾಗೂ 2 ಸಹಾಯಕ ಚುನಾವಣಾಧಿಕಾರಿ ಒಟ್ಟು 5 ಚುನಾವಣಾಧಿಕಾರಿಗಳು ಹಾಗೂ 5 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಚುನಾವಣಾ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಕುಶಾಲನಗರ ಪ.ಪಂ.ಗೆ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಸೋಮವಾರಪೇಟೆ ಪ.ಪಂ.ಗೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಶಿವಕುಮಾರ್, ವೀರಾಜಪೇಟೆ ಪ.ಪಂ. ವ್ಯಾಪ್ತಿಗೆ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಕೆ.ರಾಜು ಅವರನ್ನು ನೇಮಕ ಮಾಡಲಾಗಿದೆ.
ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯು ತಾ. 31 ರವರೆಗೆ ಜಾರಿಯಲ್ಲಿ ಇರುತ್ತದೆ.
ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮೇಲ್ವಿಚಾರಣೆ ಮಾಡಲು ನೋಡಲ್ ಅದಿsಕಾರಿಯನ್ನು ಹಾಗೂ ಸೆಕ್ಟರ್ ಆಫೀಸರ್‍ಗಳನ್ನು ನೇಮಕ ಮಾಡಲಾಗಿದೆ.
ಸೋಮವಾರಪೇಟೆ ಪ.ಪಂ.ವ್ಯಾಪ್ತಿಯ 1 ರಿಂದ 11 ವಾರ್ಡ್‍ಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ (9480695261), ತಾ.ಪಂ. ಮೇಘನಾಥ್ (9900500186) ಅವರನ್ನು ನೇಮಕ ಮಾಡಲಾಗಿದೆ.
ಕುಶಾಲನಗರ ಪ.ಪಂ.ವ್ಯಾಪ್ತಿಗೆ 1 ರಿಂದ 8 ವಾರ್ಡ್‍ಗಳಿಗೆ ತಾ.ಪಂ.ಸಹಾಯಕ ನಿರ್ದೇಶಕರಾದ ಬಿ.ಡಿ. ಸುನೀಲ್‍ಕುಮಾರ್ (9880597289), ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಲೆಕ್ಕಾಧಿಕಾರಿ ಕೆ.ಆರ್.ರವಿಕುಮಾರ್ (9448790327), 9 ರಿಂದ 16 ವಾರ್ಡ್‍ಗಳಿಗೆ ಹಾರಂಗಿ ಡ್ಯಾಂ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಧರ್ಮರಾಜು (9448825957), ಕಿರಿಯ ಎಂಜಿನಿಯರ್ ಟಿ.ಪಿ.ಸತ್ಯ (9743071171),
ವೀರಾಜಪೇಟೆ ಪ.ಪಂ.ಯ 1 ರಿಂದ 9 ವಾರ್ಡ್‍ಗಳಿಗೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಉಪ ವಿಭಾಗದ ಎಇಇ ಎಂ.ಇ.ಸುರೇಶ್ (9448504368), ಹಾತೂರು ಗ್ರಾ.ಪಂ. ದ್ವಿ.ದ.ಲೆಕ್ಕ ಸಹಾಯಕರು ಅರುಣ್ ಭಾಸ್ಕರ್ (7996198956), 10 ರಿಂದ 18 ವಾರ್ಡ್‍ಗಳಿಗೆ ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ.ಲೋಕೇಶ್ (9480695262) ಹಾಗೂ ದ್ವಿ.ದ.ಸ ಜಲೇಂದ್ರ (9986345695).
ಪಟ್ಟಣ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ವೆಚ್ಚದ ಮಿತಿಯನ್ನು ರೂ. 1 ಲಕ್ಷಕ್ಕೆ ನಿಗಧಿಪಡಿಸಿದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚದ ವಿವರಗಳನ್ನು ಪಡೆಯಲು ಮತ್ತು ಪರಿಶೀಲಿಸಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಸೋಮವಾರಪೇಟೆ ಪ.ಪಂ.ವ್ಯಾಪ್ತಿಯ 1 ರಿಂದ 11 ವಾರ್ಡ್‍ಗಳಿಗೆ ತಾ.ಪಂ. ತಾಲೂಕು ಯೋಜನಾಧಿಕಾರಿ ಡಿ.ನಾರಾಯಣ (9731508828), ಕುಶಾಲನಗರ ಪ.ಪಂ. ವ್ಯಾಪ್ತಿಯ 1 ರಿಂದ 8 ವಾರ್ಡ್‍ಗಳಿಗೆ ಹಾರಂಗಿ ಪುನರ್ವಸತಿ ವಿಭಾಗದ ಲೆಕ್ಕ ಅಧೀಕ್ಷಕರಾದ ಎಚ್.ಎನ್ ಸಂಧ್ಯಾ (9110629741), 9 ರಿಂದ 16 ವಾರ್ಡ್‍ಗಳಿಗೆ ಜಿಲ್ಲಾ ಪಂಚಾಯಿತಿಯ ಲೆಕ್ಕ ಅಧೀಕ್ಷಕರಾದ ಶ್ರೀಧರ್ ಮೂರ್ತಿ (9343727278),
ವೀರಾಜಪೇಟೆ ಪ.ಪಂ.ವ್ಯಾಪ್ತಿಯ 1 ರಿಂದ 9 ವಾರ್ಡ್‍ಗಳಿಗೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಲೆಕ್ಕ ಪರಿಶೋಧಕರಾದ ಎಚ್.ಆರ್. ರಮೇಶ್ (9916020175) ಹಾಗೂ 10 ರಿಂದ 18 ವಾರ್ಡ್‍ಗಳಿಗೆ ಪೊನ್ನಂಪೇಟೆ ತಾ.ಪಂ.ಅಭಿವೃದ್ಧಿ ಅಧಿಕಾರಿ ಗಣೇಶ್ ಕುಮಾರ್ (9480869111).
ಅತೀ ಸೂಕ್ಷ್ಮ, ಸೂಕ್ಷ್ಮ ಮತ್ತು ಸಾಮಾನ್ಯ ಮತಗಟ್ಟೆಯ ವಿವರ:- ಸೋಮವಾರಪೇಟೆ ಪ.ಪಂ.ವ್ಯಾಪ್ತಿಯ 11 ಮತಗಟ್ಟೆಗಳಲ್ಲಿ 3 ಸೂಕ್ಷ್ಮ, 2 ಅತೀ ಸೂಕ್ಷ್ಮ ಹಾಗೂ 6 ಸಾಮಾನ್ಯ ಮತಗಟ್ಟೆಗಳು. ಕುಶಾಲನಗರ ಪ.ಪಂ.ವ್ಯಾಪ್ತಿಯ 16 ಮತಗಟ್ಟೆಗಳಲ್ಲಿ 4 ಸೂಕ್ಷ್ಮ, 3 ಅತೀ ಸೂಕ್ಷ್ಮ ಹಾಗೂ 9 ಸಾಮಾನ್ಯ ಮತಗಟ್ಟೆಗಳು. ವೀರಾಜಪೇಟೆ ಪ.ಪಂ.ವ್ಯಾಪ್ತಿಯ 18 ಮತಗಟ್ಟೆಗಳಲ್ಲಿ 3 ಸೂಕ್ಷ್ಮ, 2 ಅತೀ ಸೂಕ್ಷ್ಮ ಹಾಗೂ 13 ಸಾಮಾನ್ಯ ಮತಗಟ್ಟೆಗಳಾಗಿವೆ. ಒಟ್ಟು 45 ಮತಗಟ್ಟೆಗಳಲ್ಲಿ 10 ಸೂಕ್ಷ್ಮ, 7 ಅತೀ ಸೂಕ್ಷ್ಮ ಹಾಗೂ 28 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದರು.
ರಾಜ್ಯ ಚುನಾವಣಾ ಆಯೋಗವು ವಿಶೇಷ ವೀಕ್ಷಕರಾಗಿ ಅರುಂಧತಿ ಚಂದ್ರಶೇಖರ್, ಭಾ.ಆ.ಸೇ, ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೆಂಗಳೂರು ಮತ್ತು ಸಾಮಾನ್ಯ ವೀಕ್ಷಕರಾಗಿ, ರೂಪ.ಎಂ.ಜೆ., ಅಪರ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರನ್ನು ಮತ್ತು ವೆಚ್ಚ ವೀಕ್ಷಕರನ್ನಾಗಿ, ಸುಶೀಲಮ್ಮ ಎನ್., ಮುಖ್ಯಲೆಕ್ಕಾಧಿಕಾರಿ, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ, ಬೆಂಗಳೂರು ಇವರನ್ನು ನೇಮಕ ಮಾಡಿ ಆದೇಶಿಸಿರುತ್ತದೆ.
ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯಗಳ ವಿವರ:- ಸೋಮವಾರಪೇಟೆ ಹಾಗೂ ಕುಶಾಲನಗರ ಪ.ಪಂ.ವ್ಯಾಪ್ತಿಯ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕಾರ್ಯ ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ವೀರಾಜಪೇಟೆ ಪ.ಪಂ.ವ್ಯಾಪ್ತಿಯ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯವು ವೀರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ತಾ. 31 ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆಯು ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ವೀರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೊದಲ ಬಾರಿಗೆ ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರವನ್ನು ಮುದ್ರಣ ಮಾಡಲು ಮತ್ತು ಮತಪತ್ರದಲ್ಲಿ ನೋಟಾ ವನ್ನು ಮುದ್ರಿಸಲು ರಾಜ್ಯ ಚುನಾವಣಾ ಆಯೋಗವು ನಿರ್ದೇಶನ ನೀಡಿದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ: 1-1-2019ನ್ನು ಆರ್ಹತಾ ದಿನಾಂಕವಾಗಿಟ್ಟುಕೊಂಡು ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕೈಗೊಳ್ಳಲಾಗುತ್ತಿದ್ದು. ದಿನಾಂಕ: 10-10-2018 ರಂದು ಕರಡು ಮತದಾರರ ಪಟ್ಟಿ ಪ್ರಚುರಪಡಿಸಲಾಗಿದೆ. ತಾ. 10 ರಿಂದ ನವೆಂಬರ್ 20 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸ್ವೀಕರಿಸಲಾಗುತ್ತಿದೆ.
ದಿನಾಂಕ: 1-1-2019ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಕ, ಯುವತಿಯರು ಮತ್ತು 18 ವರ್ಷ ಮೇಲ್ಪಟ್ಟ ನಾಗರೀಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದೆ ವಂಚಿತರಾಗಿದ್ದಲ್ಲಿ, ಮತದಾರರ ಪಟ್ಟ್ಟಿಗೆ ಹೆಸರು ಸೇರಿಸಲು ನಮೂನೆ-6 ರಲ್ಲಿ ಅರ್ಜಿಯನ್ನು ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬಹುದು. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವ ಮತದಾರರು ಮೃತ, ಸ್ಥಳಾಂತರ, ಪುನರಾರ್ವತನೆ ಆಗಿದ್ದಲ್ಲಿ ಹೆಸರುಗಳನ್ನು ತೆಗೆಯಲು ನಮೂನೆ-7 ರಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ನಮೂನೆ-8 ರಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ನಮೂನೆ-8ಎ ರಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6ಎ ರಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ನಮೂನೆ-6,7,8,8ಎ ಮತ್ತು 6ಎ ಗಳನ್ನು ದಿನಾಂಕ:10-10-2018 ರಿಂದ ದಿನಾಂಕ: 20-11-2018ರವರೆಗೆ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ತಾಲೂಕು ಕಚೇರಿಗಳಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ, ಉಪ ವಿಭಾಗಾಧಿಕಾರಿಗಳ ಮತ್ತು ತಹಶೀಲ್ದಾರರ ಕಚೇರಿಯನ್ನು ಸಂಪರ್ಕಿಸಬಹುದು ಹಾಗೂ ತಿತಿತಿ.ಛಿeoಞಚಿಡಿಟಿಚಿಣಚಿಞಚಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿಯೂ ಸಹ ಹೆಚ್ಚಿನ ಮಾಹಿತಿ ಲಭ್ಯವಿದ್ದು, ಮಾಹಿತಿಯನ್ನು ಪಡೆಯಬಹುದು.