ಮಡಿಕೇರಿ, ಅ. 21: ಶಿರಂಗಾಲ ಗ್ರಾಮದ ನಿವಾಸಿ ಶಿಶುಪಾಲ ಎಂಬವರ ತಂದೆ ಎಸ್.ಹೆಚ್. ರಾಮೇಗೌಡ (80) ಎಂಬವರು ಕಳೆದ ಸೆಪ್ಟೆಂಬರ್ 20 ರಂದು ಮನೆಯಿಂದ ನಾಪತ್ತೆಯಾಗಿರು ವರೆಂದು ಪುತ್ರ ಶಿಶುಪಾಲ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
*ಸಿದ್ದಾಪುರ ನಿವಾಸಿ ರಿಹಾನಬಾನು ಎಂಬಾಕೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ತನ್ನ ಪತಿ ಮನ್ಸೂರ್ ಶರೀಫ್ (32) ಎಂಬ ವ್ಯಕ್ತಿ 2016ರ ಜುಲೈ 20 ರಂದು ಚನ್ನರಾಯಪಟ್ಟಣಕ್ಕೆ ಹೋಗಿ ಬರುವದಾಗಿ ತಿಳಿಸಿ ತೆರಳಿದ್ದು, ಇದುವರೆಗೆ ಹಿಂತಿರುಗಿಲ್ಲವೆಂದು ಅಳಲು ತೋಡಿಕೊಂಡಿದ್ದಾಳೆ.
*ಸಿದ್ದಾಪುರ ನಿವಾಸಿ ಬಿ.ವಿ. ಸತೀಶ್ ರೈ ಪೊಲೀಸ್ ಠಾಣೆಗೆ ಪುಕಾರು ನೀಡಿ, ಕಳೆದ ಏಪ್ರಿಲ್ 16 ರಂದು ತನ್ನ ಮಗ ಬಿ.ಎಸ್. ಶ್ರೇಯಸ್ ಅಲಿಯಾಸ್ ಶಿಶಿರ್ (18) ಎಂಬಾತ ಮನೆಯಿಂದ ಕಾಣೆಯಾಗಿದ್ದು, ಈ ತನಕ ಹಿಂತಿರುಗಿ ಬಂದಿಲ್ಲವೆಂದು ತಿಳಿಸಿದ್ದಾರೆ. ಆ ಮೇರೆಗೆ ಮೇಲಿನ ಮೂರು ಪ್ರಕರಣಗಳಲ್ಲಿ ಸಂಬಂಧಿಸಿದ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.