ಮಡಿಕೇರಿ, ಅ. 21: ಪ್ರಕೃತ್ತಿ ವಿಕೋಪದಿಂದ ಹಾನಿಗೊಳಗಾಗಿದ್ದ ಕಾಲೂರು ಗ್ರಾಮದ ಮಹಿಳೆಯರಿಗೆ ಭಾರತೀಯ ವಿದ್ಯಾಭವನದ ಕೊಡಗು ಘಟಕ ಮತ್ತು ಪ್ರಾಜೆಕ್ಟ್ ಕೂರ್ಗ್ ವತಿಯಿಂದ ‘ಯಶಸ್ವಿ’ ಹೆಸರಿನಲ್ಲಿ ಹಮ್ಮಿಕೊಂಡಿರುವ ಟೈಲರಿಂಗ್ ಮತ್ತು ಆಹಾರೋತ್ಪನ್ನಗಳ ತಯಾರಿಕೆಯ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ದೊರಕಿದೆ.ಕಾಲೂರು ಸರ್ಕಾರಿ ಶಾಲೆಯಲ್ಲಿ ಟೈಲರಿಂಗ್ ತರಬೇತಿ ಉದ್ಘಾಟಿಸಿದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಂತ್ರಸ್ತ ಗ್ರಾಮಸ್ಥರ ಭವಿಷ್ಯದ ಜೀವನಕ್ಕೆ ನೆರವಾಗಬಲ್ಲ ನಿಟ್ಟಿನಲ್ಲಿ ಇಂತಹ ಯೋಜನೆಗಳು ಮಡಿಕೇರಿ, ಅ. 21: ಪ್ರಕೃತ್ತಿ ವಿಕೋಪದಿಂದ ಹಾನಿಗೊಳಗಾಗಿದ್ದ ಕಾಲೂರು ಗ್ರಾಮದ ಮಹಿಳೆಯರಿಗೆ ಭಾರತೀಯ ವಿದ್ಯಾಭವನದ ಕೊಡಗು ಘಟಕ ಮತ್ತು ಪ್ರಾಜೆಕ್ಟ್ ಕೂರ್ಗ್ ವತಿಯಿಂದ ‘ಯಶಸ್ವಿ’ ಹೆಸರಿನಲ್ಲಿ ಹಮ್ಮಿಕೊಂಡಿರುವ ಟೈಲರಿಂಗ್ ಮತ್ತು ಆಹಾರೋತ್ಪನ್ನಗಳ ತಯಾರಿಕೆಯ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ದೊರಕಿದೆ.ಕಾಲೂರು ಸರ್ಕಾರಿ ಶಾಲೆಯಲ್ಲಿ ಟೈಲರಿಂಗ್ ತರಬೇತಿ ಉದ್ಘಾಟಿಸಿದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಂತ್ರಸ್ತ ಗ್ರಾಮಸ್ಥರ ಭವಿಷ್ಯದ ಜೀವನಕ್ಕೆ ನೆರವಾಗಬಲ್ಲ ನಿಟ್ಟಿನಲ್ಲಿ ಇಂತಹ ಯೋಜನೆಗಳು ಮಾತನಾಡಿ, ಸಂತ್ರಸ್ತರಲ್ಲಿ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಇಂತಹ ಕೌಶಲ್ಯಾಭಿವೃದ್ಧಿ ತರಬೇತಿ ಪ್ರಶಂಸನೀಯ. ಇದು ಸ್ವಾವಲಂಬಿ ಜೀವನ ನಡೆಸಲು ಪ್ರೇರಣೆಯಾಗಲಿದೆ ಎಂದರು. ಕೊಡಗಿನ ಶಾಸಕರೆಲ್ಲರೂ ರಾಜಕೀಯ ರಹಿತವಾಗಿ ನವ ಕೊಡಗಿನ ನಿರ್ಮಾಣಕ್ಕೆ ಮುಂದಾಗಲಿದ್ದಾರೆ ಎಂದು ಭರವಸೆ ನೀಡಿದರು. ಸಂತ್ರಸ್ತ ಮಹಿಳೆಯರಿಗಾಗಿ ಗಾರ್ಮೆಂಟ್ ಉದ್ಯಮವನ್ನು ಸ್ಥಾಪಿಸಲು ಸರ್ಕಾರದಿಂದ ಸೂಕ್ತ ನೆರವು ನೀಡುವದಾಗಿಯೂ ವೀಣಾ ಅಚ್ಚಯ್ಯ ಹೇಳಿದರು.
ಭಾರತೀಯ ವಿದ್ಯಾಭವನದ
ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ, ಮಡಿಕೇರಿಯ ಕೊಡವ ಸಮಾಜ ಸಂಕೀರ್ಣದಲ್ಲಿನ ಅಂಗಡಿಗಳಲ್ಲಿ ಕಾಲೂರು ಗ್ರಾಮಸ್ಥರು ತಯಾರಿಸಿದ ಆಹಾರೋತ್ಪನ್ನ, ಉಡುಪುಗಳ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದರಲ್ಲದೆ, ಕಾಲೂರಿನ ಶ್ರೀ ಅಯ್ಯಪ್ಪ ದೇವಾಲಯ ನಿರ್ಮಾಣಕ್ಕೆ ಭಾರತೀಯ ವಿದ್ಯಾಭವನದಿಂದ ಅಗತ್ಯ ನೆರವು ನೀಡುವದಾಗಿಯೂ ಪ್ರಕಟಿಸಿದರು. ಗ್ರಾಮೀಣ ಜನರ ಸಂಕಷ್ಟ ನಿವಾರಣೆಗಾಗಿ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳನ್ನೊಳಗೊಂಡಂತೆ ಜನಸೇವಾ ಟ್ರಸ್ಟ್‍ನ್ನು ಪ್ರಾರಂಭಿಸಿದ್ದು, ಟ್ರಸ್ಟ್ ಮೂಲಕ ಸಂಗ್ರಹವಾಗುವ ಹಣವನ್ನು ನಿರಾಶ್ರಿತರ ಬದುಕು ರೂಪಿಸಲು ವೆಚ್ಚ ಮಾಡಲಾಗುತ್ತದೆ ಎಂದು ದೇವಯ್ಯ ಹೇಳಿದರು.
ಡಾ. ಎಂ.ಜಿ. ಪಾಟ್ಕರ್ ಮಾತನಾಡಿ, ಮಾನವರಿಗೆ ಪ್ರಕೃತಿಯ ಅಗತ್ಯವಿದೆಯೇ ವಿನಾ ಪ್ರಕೃತಿಗೆ ಮಾನವನ ಅಗತ್ಯವಿಲ್ಲ. ಹೀಗಾಗಿ, ಪ್ರಕೃತಿಯನ್ನು ರಕ್ಷಿಸುವತ್ತಲೂ ಮಾನವ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
(ಮೊದಲ ಪುಟದಿಂದ)
ಪ್ರಾಜೆಕ್ಟ್ ಕೂರ್ಗ್ ಸಂಚಾಲಕ, ಭಾರತೀಯ ವಿದ್ಯಾಭವನದ ಕೊಡಗು ಘಟಕದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಮಾತನಾಡಿ, ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೂ ಪ್ರಾಜೆಕ್ಟ್ ಕೂರ್ಗ್ ಯೋಜನೆಗೆ ನೆರವು ಲಭಿಸಿದ್ದು ಕಾಲೂರಿನಲ್ಲಿ ಪ್ರಸ್ತುತ 26 ಟೈಲರಿಂಗ್ ಯಂತ್ರಗಳ ಮೂಲಕ ಗ್ರಾಮದ ಮಹಿಳೆಯರಿಗೆ ಟೈಲರಿಂಗ್ ನಲ್ಲಿ ವಿಭಾಗವಾರು 3 ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ. ಅಂತೆಯೇ ಆಹಾರೋತ್ಪನ್ನಗಳ ಬಗ್ಗೆ 30 ಮಹಿಳೆಯರಿಗೆ ಪ್ರಥಮ ಹಂತದಲ್ಲಿ ಲಭಿಸಿದ್ದು ಕಾಲೂರಿನಲ್ಲಿ ಪ್ರಸ್ತುತ 26 ಟೈಲರಿಂಗ್ ಯಂತ್ರಗಳ ಮೂಲಕ ಗ್ರಾಮದ ಮಹಿಳೆಯರಿಗೆ ಟೈಲರಿಂಗ್ ನಲ್ಲಿ ವಿಭಾಗವಾರು 3 ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ. ಅಂತೆಯೇ ಆಹಾರೋತ್ಪನ್ನಗಳ ಬಗ್ಗೆ 30 ಮಹಿಳೆಯರಿಗೆ ಪ್ರಥಮ ಹಂತದಲ್ಲಿ ಅಶ್ರಫುನ್ನೀಸಾ, ಉಡುಪಿಯ ಹೆಸರಾಂತ ಆಹಾರೋತ್ಪನ್ನ ತರಬೇತುದಾರರಾದ ನೀನಾ ಆರ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾಲೂರಿನ ನಿವೃತ್ತ ಯೋಧ 103 ವರ್ಷದ ನಂದಲಪ್ಪಂಡ ಮೇದಪ್ಪ ಅವರಿಗೆ ಗಾಲಿ ಕುರ್ಚಿಯನ್ನು ನೀಡಲಾಯಿತು. ಫಲಾನುಭವಿಗಳಿಗೆ ಜೇನುಪೆಟ್ಟಿಗೆ, ಕುಡಿಯುವ ನೀರಿನ ಸರಬರಾಜು ಪೈಪ್‍ಗಳನ್ನು ಪ್ರಾಜೆಕ್ಟ್ ಕೂರ್ಗ್, ಭಾರತೀಯ ವಿದ್ಯಾಭವನದ ವತಿಯಿಂದ ವಿತರಿಸಲಾಯಿತು.
ಮಡಿಕೇರಿ ಕೊಡವ ಸಮಾದ ಉಪಾಧ್ಯಕ್ಷ ಎಂ.ಇ. ಚಿಣ್ಣಪ್ಪ, ಪ್ರಾಜೆಕ್ಟ್ ಕೂರ್ಗ್‍ನ ಡಾ. ನಯನ ಕಶ್ಯಪ್, ಭಾರತೀಯ ವಿದ್ಯಾಭವನದ ಸದಸ್ಯ ಕುಪ್ಪಂಡ ಪ್ರೇಮ್ ನಾಥ್ ವೇದಿಕೆಯಲ್ಲಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ, ಪ್ರಾಜೆಕ್ಟ್ ಕೂರ್ಗ್‍ನ ನಿರ್ದೇಶಕರಾದ ಮಂಡೇಪಂಡ ರತನ್ ಕುಟ್ಟಯ್ಯ, ರಮೇಶ್ ಹೊಳ್ಳ, ಅನಿಲ್ ಎಚ್.ಟಿ., ಕೊಲ್ಯದ ಗಿರೀಶ್, ಮೋಹನ್ ದಾಸ್, ಜಯಂತ್ ರಾವ್, ವೇದಮೂರ್ತಿ, ಶ್ರೀ ಓಂಕಾರೇಶ್ವರ ದೇವಾಲಯದ ಅಧ್ಯಕ್ಷ ಜಗದೀಶ್, ವ್ಯವಸ್ಥಾಪಕ ಎಸ್.ಎಸ್. ಸಂಪತ್ ಕುಮಾರ್, ತೆನ್ನೀರ ಮೈನಾ, ಡಾ. ಜಯಲಕ್ಷೀ ಪಾಟ್ಕರ್ ಸೇರಿದಂತೆ ಗಣ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.