ಮಡಿಕೇರಿ, ಅ. 22: ಮಡಿಕೇರಿಯ ಹಿರಿಯ ತಜ್ಞ ವೈದ್ಯ ಡಾ. ರವಿ ಅಪ್ಪಾಜಿ ಅವರಿಗೆ ಅಂತರ ರಾಷ್ಟ್ರೀಯ ರೋಟರಿ ಸಂಸ್ಥೆಯಿಂದ ಪ್ರತಿಷ್ಠಿತ ಸರ್ವೀಸ್ ಎಬೋವ್ ಸೆಲ್ಫ್ ಎಂಬ ಗೌರವ ಪ್ರಶಸ್ತಿ ದೊರಕಿದೆ.

ರೋಟರಿ ಸಂಸ್ಥೆ ಯಲ್ಲಿ ಅತ್ಯುನ್ನುತ ವೈಯಕ್ತಿಕ ಪ್ರಶಸ್ತಿಯಾಗಿರುವ ಸರ್ವೀಸ್ ಎಬೋವ್ ಸೆಲ್ಫ್‍ನ್ನು ಚಿಕಾಗೋದಲ್ಲಿ ಇತ್ತೀಚಿಗೆ ನಡೆದ ಅಂತರರಾಷ್ಟ್ರೀಯ ರೋಟರಿ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದಂತೆ ಡಾ. ರವಿ ಅಪ್ಪಾಜಿಯವರಿಗೆ ನೀಡಲಾಗಿದೆ. ಈ ಪ್ರಶಸ್ತಿಯನ್ನು ಚೆನ್ನೈನಲ್ಲಿ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಮಾಜಿ ಗವರ್ನರ್ ಪಾಂಡುರಂಗ ಶೆಟ್ಟಿ ಡಾ. ರವಿ ಅಪ್ಪಾಜಿಯವರಿಗೆ ಪ್ರದಾನ ಮಾಡಿದರು.

ರೋಟರಿ ಸಂಸ್ಥೆಯಲ್ಲಿ ಡಾ. ರವಿ ಅಪ್ಪಾಜಿಯವರ ಸೇವೆ, ರೋಟರಿ