ಮಡಿಕೇರಿ, ಅ. 21: ಇಲ್ಲಿನ ಪೊಲೀಸ್ ಕವಾಯತು ಮೈದಾನ ಬಳಿ ಪೊಲೀಸ್ ಹುತಾತ್ಮ ಸ್ಮಾರಕದಲ್ಲಿ ಇಂದು ಅರ್ಥಪೂರ್ಣವಾಗಿ ಪೊಲೀಸ್ ಹುತಾತ್ಮರ ದಿನಾಚರಣೆ ಯೊಂದಿಗೆ ಒಂದು ವರ್ಷದಲ್ಲಿ ಇದುವರೆಗೆ ದೇಶದಲ್ಲಿ ಕರ್ತವ್ಯದ ಸಂದರ್ಭ ಬಲಿದಾನಿಗಳಾಗಿರುವ 414 ಮಂದಿ ಪೊಲೀಸ್ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಪಿ. ಸುಮನ್ ನೇತೃತ್ವದಲ್ಲಿ, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರು ಪೊಲೀಸ್ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಪೊಲೀಸ್ ಅಧೀಕ್ಷಕರು 414 ಮಂದಿ ಬಲಿದಾನಿಗಳ ಪೈಕಿ ಕರ್ನಾಟಕದ 15 ಮಂದಿ ಸೇರಿದಂತೆ, ದೇಶದ ಬೇರೆ ಬೇರೆ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಪ್ರಾಣಾರ್ಪಣೆಗೈ ದವರ ಪಟ್ಟಿಯನ್ನು ಬಿಡುಗಡೆ ಗೊಳಿಸಿದರು.
ಜಿಲ್ಲಾಧಿಕಾರಿ ಗೌರವ ನಮನ ಸಲ್ಲಿಸಿ ಮಾತನಾಡುತ್ತಾ, ದಿನದ 24 ಗಂಟೆಯೂ ಕಾನೂನು ಸುವ್ಯವಸ್ಥೆ ಕಾಪಾಡುತ್ತಾ, ತ್ಯಾಗ, ಶೌರ್ಯದಿಂದ ಸೇವೆ ಸಲ್ಲಿಸುವ ಪೊಲೀಸರು ಶಾರೀರಿಕ ಮತ್ತು ಮಾನಸಿಕ ದೃಢತೆಯಿಂದ ಸಮಾಜಮುಖಿ ಬೇರೆ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಪ್ರಾಣಾರ್ಪಣೆಗೈ ದವರ ಪಟ್ಟಿಯನ್ನು ಬಿಡುಗಡೆ ಗೊಳಿಸಿದರು.ಜಿಲ್ಲಾಧಿಕಾರಿ ಗೌರವ ನಮನ ಸಲ್ಲಿಸಿ ಮಾತನಾಡುತ್ತಾ, ದಿನದ 24 ಗಂಟೆಯೂ ಕಾನೂನು ಸುವ್ಯವಸ್ಥೆ ಕಾಪಾಡುತ್ತಾ, ತ್ಯಾಗ, ಶೌರ್ಯದಿಂದ ಸೇವೆ ಸಲ್ಲಿಸುವ ಪೊಲೀಸರು ಶಾರೀರಿಕ ಮತ್ತು ಮಾನಸಿಕ ದೃಢತೆಯಿಂದ ಸಮಾಜಮುಖಿ ಗಡಿ ಲಡಾಕ್‍ನಲ್ಲಿ ಗಡಿ ಪೊಲೀಸ್ ಪಡೆ ತಂಡದ 10 ಮಂದಿ ಬಲಿದಾನದೊಂದಿಗೆ, 1969ರಿಂದ ಇಡೀ ದೇಶ ಬಲಿದಾನ ದಿನ ಆಚರಿಸುವ ಕ್ರಮ ಜಾರಿಗೊಂಡಿದ್ದಾಗಿ ಈ ಸಂದರ್ಭ ಸ್ಮರಿಸಿದರು. ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಈ ಸಂಬಂಧ ಕಾರ್ಯಕ್ರಮ ಆಯೋಜಿಸುವದ ರೊಂದಿಗೆ ಎಲ್ಲಾ ರಾಜ್ಯಗಳಲ್ಲಿ ಹುತಾತ್ಮರ
(ಮೊದಲ ಪುಟದಿಂದ) ಸ್ಮರಣೆಗೈಯ್ಯಲಾಗುತ್ತಿದೆ ಎಂದು ನೆನಪಿಸಿದರು.
ಉಪವಿಭಾಗಾಧಿಕಾರಿ ಜವರೇಗೌಡ, ಡಿವೈಎಸ್‍ಪಿಗಳಾದ ಕೆ.ಎಸ್. ಸುಂದರ್‍ರಾಜ್, ನಾಗಪ್ಪ, ನಿವೃತ್ತ ಎಸ್‍ಪಿ ಎಂ.ಕೆ. ಅಪ್ಪಯ್ಯ, ಮೇ. ಚಿಂಗಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ವಾರ್ತಾಧಿಕಾರಿ ಚಿನ್ನಸ್ವಾಮಿ, ನಗರಸಭಾ ಸದಸ್ಯೆ ಶ್ರೀಮತಿ ಬಂಗೇರ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಶ್ರೇಣಿಯ ಅಧಿಕಾರಿಗಳು, ನಿವೃತ್ತ ಸಿಬ್ಬಂದಿ ಕೂಡ ಪುಷ್ಪನಮನ ಸಲ್ಲಿಸಿದರು.
ಪೊಲೀಸ್ ನಿರೀಕ್ಷಕ ಮೇದಪ್ಪ, ಜಿಲ್ಲಾ ಶಸಸ್ತ್ರ ಪಡೆಯ ತಿಮ್ಮಪ್ಪಗೌಡ, ಇನ್ಸ್‍ಪೆಕ್ಟರ್‍ಗಳ ಪರವಾಗಿ ಭರತ್, ಮಾಜಿ ಸೈನಿಕರ ಪರವಾಗಿ ಮೇಜರ್(ನಿವೃತ್ತ) ಬಿ.ಎಸ್. ಚಿಂಗಪ್ಪ, ಪಿಎಸ್‍ಐಗಳ ಪರವಾಗಿ ಷಣ್ಮುಗ, ಮಹಿಳಾ ಪೊಲೀಸರ ಪರವಾಗಿ ಅಚ್ಚಮ್ಮ, ಪೊಲೀಸರ ಪರವಾಗಿ ಮಹದೇವ, ಸಹಾಯಕ ಮುಖ್ಯ ಪೇದೆಗಳ ಪರವಾಗಿ ಅಶೋಕ, ನಿವೃತ್ತ ಮಹಿಳಾ ಪೊಲೀಸರ ಪರವಾಗಿ ಪಾರ್ವತಿ, ನಿವೃತ್ತ ಪೊಲೀಸರ ಪರವಾಗಿ ಕಾವೇರಪ್ಪ, ಇತರರು ಪೊಲೀಸ್ ಹುತಾತ್ಮರ ಪ್ರತಿಮೆಗೆ ಹೂಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಅರ್ಪಿಸಲಾಯಿತು. ಪೊಲೀಸ್ ಮುಖ್ಯ ಪೇದೆ ಸಿದ್ದೇಶ್ ನೇತೃತ್ವದ ಪೊಲೀಸ್ ವಾದ್ಯ ತಂಡದವರು ರಾಷ್ಟ್ರಗೀತೆ ಹಾಡಿದರು. ಅಂತೋಣಿ ಡಿಸೋಜ ನಿರೂಪಿಸಿದರು.