ಗುಡ್ಡೆಹೊಸೂರು, ಅ. 21: ಇಲ್ಲಿಗೆ ಸಮೀಪದ ನಂಜರಾಯಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇತ್ತೀಚೆಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ 13 ಮಂದಿ ಆಯ್ಕೆಗೆ ಒಟ್ಟು 39 ಮಂದಿ ಸ್ಪರ್ಧಿಸಿದ್ದರು. ನೂತನವಾಗಿ ಆಯ್ಕೆಯಾದವರಲ್ಲಿ ಎ.ವಿ. ಶಾಂತಕುಮಾರ್, ಡಿ.ಎಲ್. ಮಹೇಶ್ಚಂದ್ರ (ಮನು ಮಹೇಶ್), ಬಿ.ಸಿ. ಮುರಳಿ ಮಾದಯ್ಯ, ಪಿ.ಬಿ. ಅಶೋಕ್, ಕೆ.ಡಿ. ದಾದಪ್ಪ, ಬಿ.ಎನ್. ಕಾಶಿ, ಹೆಚ್.ಎನ್. ಕಮಲಮ್ಮ, ಎಸ್.ಬಿ. ಅನಿತಾ, ಬಿ.ಎಸ್. ಧನಪಾಲ್, ವಿ.ಎಸ್. ರಾಜಪ್ಪ, ಕೆ.ಜಿ. ಲೋಕನಾಥ್, ಆರ್.ಕೆ. ಚಂದ್ರ, ಹೆಚ್.ಜೆ. ಕೃಷ್ಣ ಆಯ್ಕೆಯಾದರು. ಅಧ್ಯಕ್ಷರ ಆಯ್ಕೆ ತಾ. 27 ರಂದು ಸಂಘದ ಕಚೇರಿಯಲ್ಲಿ ನಡೆಯಲಿದೆ. ರಾಜಕೀಯ ಪಕ್ಷದ ಪರವಾಗಿ ಮೂರು ತಂಡಗಳು ರಚನೆಯಾಗಿ ಚುನಾವಣೆ ಪ್ರಚಾರ ಕೈಗೊಂಡಿದ್ದರು, ಅದರಲ್ಲಿ ಬಿ.ಜೆ.ಪಿ. ಪರ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳಿಸಿ ಮತ್ತೆ ನಂಜರಾಯಪಟ್ಟಣ ಆಡಳಿತ ಮಂಡಳಿಯು ಬಿ.ಜೆ.ಪಿ. ಪಾಲಾಗಲಿದೆ. ಈ ಹಿಂದೆ ಬಿ.ಜೆ.ಪಿ. ಅಭ್ಯರ್ಥಿ ಮನು ಮಹೇಶ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.