ಗೋಣಿಕೊಪ್ಪ ವರದಿ, ಅ. 18: 40ನೇ ವರ್ಷದ ಗೋಣಿಕೊಪ್ಪ ದಸರಾ ತಾ. 19 ರಂದು (ಇಂದು) ಚಾಮುಂಡೇಶ್ವರಿ ದೇವಿ ವಿಸರ್ಜನೆ ಯೊಂದಿಗೆ ತೆರೆ ಬೀಳಲಿದೆ. ಮಧ್ಯಾಹ್ನ ನಡೆಯುವ ಸ್ತಬ್ದಚಿತ್ರ ಮೆರವಣಿಗೆ, ಮಂಟಪ ಸಮಿತಿಗಳ ತೇರುಗಳ ಕಲಾಕೃತಿಗಳ ಶೋಭಾ ಯಾತ್ರೆ ಈ ದಿನದ ವಿಶೇಷತೆಯಾಗಿದೆ.

ಸರಳ ದಸರಾ ಆಚರಣೆಯಾಗಿ ರುವ ಕಾರಣ ಶೋಭಾಯಾತ್ರೆ ಕೂಡ ತನ್ನ ಮೆರಗು ಕಳೆದುಕೊಳ್ಳಲಿದೆ. 7-8 ವಾಹನಗಳ ಮೂಲಕ ಕಲಾಕೃತಿಯ ತೇರು ನಿರ್ಮಾಣದ ಮೂಲಕ ಭಾರೀ ಉದ್ದದ ತೇರುಗಳ ಮೆರವಣಿಗೆ ಇಂದು ಕಾಣ ಸಿಗುವದಿಲ್ಲ. ಸಂಪ್ರದಾಯಿಕ ತೇರು ನಿರ್ಮಾಣದ ಮೂಲಕ ಭಾರೀ ಉದ್ದದ ತೇರುಗಳ ಮೆರವಣಿಗೆ ಇಂದು ಕಾಣ ಸಿಗುವದಿಲ್ಲ. ಸಂಪ್ರದಾಯಿಕ ರಾತ್ರಿ 11 ಗಂಟೆಗೆ ಉಮಾ ಮಹೇಶ್ವರಿ ದೇವಾಲಯ ಆವರಣದಿಂದ (ಮೊದಲ ಪುಟದಿಂದ) ಶೋಭಾಯಾತ್ರೆ ಆರಂಭಗೊಳ್ಳಲಿದೆ. ಆಚರಣೆಯಂತೆ ಕಾವೇರಿ ದಸರಾ ಸಮಿತಿಯ ಚಾಮುಂಡೇಶ್ವರಿ ದೇವಿಯ ಮಂಟಪ ಮುಂದಿನ ಸಾಲಿನಲ್ಲಿ ಸಾಗಲಿದೆ. ಇದರೊಂದಿಗೆ ಭಗವತಿ ದಸರ ಸಮಿತಿ, ಸರ್ವರ ದಸರಾ ಸಮಿತಿ, ಕಾಡ್ಲಯ್ಯಪ್ಪ ದಸರಾ ಸಮಿತಿ, ಶಾರದಾಂಬೆ, ನಮ್ಮ ದಸರಾ ಸಮಿತಿ, ಸ್ನೇಹಿತರ ಬಳಗ, ನವಚೇತನ ದಸರಾ ಸಮಿತಿ, ಯುವ ದಸರಾ ಸಮಿತಿ, ನಾಡಹಬ್ಬ ದಸರಾ (ಮೊದಲ ಪುಟದಿಂದ) ಶೋಭಾಯಾತ್ರೆ ಆರಂಭಗೊಳ್ಳಲಿದೆ. ಆಚರಣೆಯಂತೆ ಕಾವೇರಿ ದಸರಾ ಸಮಿತಿಯ ಚಾಮುಂಡೇಶ್ವರಿ ದೇವಿಯ ಮಂಟಪ ಮುಂದಿನ ಸಾಲಿನಲ್ಲಿ ಸಾಗಲಿದೆ. ಇದರೊಂದಿಗೆ ಭಗವತಿ ದಸರ ಸಮಿತಿ, ಸರ್ವರ ದಸರಾ ಸಮಿತಿ, ಕಾಡ್ಲಯ್ಯಪ್ಪ ದಸರಾ ಸಮಿತಿ, ಶಾರದಾಂಬೆ, ನಮ್ಮ ದಸರಾ ಸಮಿತಿ, ಸ್ನೇಹಿತರ ಬಳಗ, ನವಚೇತನ ದಸರಾ ಸಮಿತಿ, ಯುವ ದಸರಾ ಸಮಿತಿ, ನಾಡಹಬ್ಬ ದಸರಾ ದಸರಾ ಸಮಿತಿ ಆಯೋಜಿಸುತ್ತಿದ್ದ ಸ್ತಬ್ಧಚಿತ್ರ ಸ್ಪರ್ಧೆ ಕೂಡ ಇರುವದಿಲ್ಲ. ಆಚರಣೆಗೆ ತೊಡಕ್ಕಾಗಬಾರದು ಎಂಬ ಕಾರಣಕ್ಕೆ ಸ್ತಬ್ಧಚಿತ್ರ ತೇರು ಅನಾವರಣಗೊಳಿಸಲಾಗುತ್ತಿದೆ.

ಭರತನಾಟ್ಯ, ನೃತ್ಯ ವೈಭವ

ಬುಧವಾರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭರತ ನಾಟ್ಯ ಹಾಗೂ ಸಿನೆಮಾ ಗೀತೆಯ ನೃತ್ಯಗಳು ಗಮನ ಸೆಳೆದವು. ಜಗನ್ಮೋಹನ ನಾಟ್ಯಾಲಯ ತಂಡದಿಂದ ಭರತ ನಾಟ್ಯ 45 ನಿಮಿಷಗಳ ಕಾಲ ಅನಾವರಣಗೊಂಡಿತು. ಸೈಕ್ಲೋನ್ ತಂಡದಿಂದ ಸಿನೆಮಾ ನೃತ್ಯ ಕಾರ್ಯಕ್ರಮ ನಡೆಯಿತು. 2 ಗಂಟೆಗಳ ಕಾಲ ಕಲಾವಿದರುಗಳು ನೃತ್ಯ ಪ್ರದರ್ಶನ ಮಾಡಿದರು. ಗೋಣಿಕೊಪ್ಪ, ಮೂರ್ನಾಡು, ವೀರಾಜಪೇಟೆಯ ಸೈಕ್ಲೋನ್ ತಂಡದ ಕಲಾವಿದರು ಪಾಲ್ಗೊಂಡರು.

ಸನ್ಮಾನ, ಅನ್ನದಾನ

ಇಲ್ಲಿನ ನವಚೇತನಾ ದಸರಾ ಸಮಿತಿ 29 ವರ್ಷ ಪೂರೈಸಿದ ಅಂಗವಾಗಿ ಅನ್ನದಾನ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಿತ್ತು.

ಸ್ಥಳೀಯ ವರ್ತಕರುಗಳಾದ ಮಂಜು, ಎಂ. ಬಿ. ಬಾಷಾ ಹಾಗೂ ಪಿ.ಕೆ. ಕುಂಞ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ದಾನಿ ಎಂ.ಜಿ. ಮೋಹನ್, ನವಚೇತನಾ ದಸರಾ ಸಮಿತಿ ಅಧ್ಯಕ್ಷ ಕರ್ಣರಾಜ್, ಪಂಚಾಯಿತಿ ಸದಸ್ಯರುಗಳಾದ ಜಮ್ಮಡ ಸೋಮಣ್ಣ, ಮುರುಗ, ಪ್ರಮುಖರುಗಳಾದ ಎಂ. ಆರ್. ರಫೀಕ್, ಅಬ್ದುಲ್ ಜಲೀಲ್, ಶಂಕರ್, ಪ್ರದೀಪ್, ಸಚಿನ್ ಉಪಸ್ಥಿತರಿದ್ದರು.

ವರದಿ: ಸುದ್ದಿಪುತ್ರ