ಗೋಣಿಕೊಪ್ಪಲು, ಅ. 18: ಇಲ್ಲಿನ ಕಾವೇರಿ ಪದವಿ ಕಾಲೇಜಿನ ಪೋಷಕ ಬೋಧಕರ ಸಭೆ ನಡೆಯಿತು. ಈ ಸಂದರ್ಭ ಮಾತನಾಡಿದ ಪ್ರಾಂಶುಪಾಲೆ ಪ್ರೊ. ಎಸ್.ಆರ್. ಉಷಾಲತ, ಪೋಷಕರು ತಮ್ಮ ಬಿಡುವಿಲ್ಲದ ಸಮಯದ ನಡುವೆಯೂ ತಮ್ಮ ಮಕ್ಕಳಿಗಾಗಿ ದಿನಕ್ಕೆ ಅರ್ಧ ಗಂಟೆಯ ಸಮಯವನ್ನಾದರೂ ಮೀಸಲಿಡಬೇಕು. ಪರೀಕ್ಷೆಯ ಸಮಯದಲ್ಲಿ ಮೊಬೈಲ್ನಿಂದ ಮಕ್ಕಳು ದೂರವಿರುವಂತೆ ನೋಡಿಕೊಳ್ಳಬೇಕೆಂದರು. ಉಪ ಪ್ರಾಂಶುಪಾಲೆ ಪ್ರೊ. ಎ.ಎಂ. ಕಮಲಾಕ್ಷಿ ಮಾತನಾಡಿದರು. ಈ ಸಂದರ್ಭ ಪೋಷಕ-ಬೋಧಕ ಸಮಿತಿಯ ಉಪಾಧ್ಯಕ್ಷ ಚೇಂದ್ರಿಮಾಡ ಕಾಳಯ್ಯ, ಜಂಟಿ ಕಾರ್ಯದರ್ಶಿಗಳಾದ ಮುರುವಂಡ ಶಮಿ ಉತ್ತಪ್ಪ, ಕಳ್ಳಿಚಂಡ ಚಿತ್ರ, ಸಂಚಾಲಕಿ ಎನ್.ಪಿ. ರೀತ, ಪೋಷಕರು ಹಾಗೂ ಬೋಧಕರು ಉಪಸ್ಥಿತರಿದ್ದರು.