ಚೆಟ್ಟಳ್ಳಿ, ಅ. 18: ಕಂಡಕರೆಯಲ್ಲಿ ಸುನ್ನಿ ಜಂಯ್ಯತುಲ್ ಮುಹಲ್ಲಿಮೀನ್ ಪಾಲಿಬೆಟ್ಟ ರೇಂಜ್ ಸುನ್ನಿ ಬಾಲ ಸಂಘ ಇವರ ವತಿಯಿಂದ ಪ್ರತಿನಿಧಿ ಸಮಾವೇಶ ಕಂಡಕರೆಯ ಹಯಾತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.
ಪ್ರತಿನಿಧಿ ಸಮಾವೇಶದ ಪ್ರಾಸ್ತಾವಿಕ ಭಾಷಣವನ್ನು ವೀರಾಜಪೇಟೆಯ ಅನ್ವಾರುಲ್ ಹುದಾ ಸೆಂಟರ್ ಪ್ರಾಧ್ಯಾಪಕ ಯಾಕುಬ್ ಮಾಸ್ಟರ್ ಮಾಡಿದರು. ಸಮಾವೇಶದಲ್ಲಿ 15 ವಿವಿಧ ಮದರಸಗಳಿಂದ 95 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 17 ಪ್ರಾಧ್ಯಾಪಕರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ರೇಂಜ್ ಕಾರ್ಯದರ್ಶಿ ಹಸೈನಾರ್ ಮಹ್ಳರಿ, ಹಂಸ ಸಹದಿ, ಮಹಲ್ ಅಧ್ಯಕ್ಷ ಆಲಿ, ಕಾರ್ಯದರ್ಶಿ ಗಫೂರ್, ಹನೀಫ ಮುಸ್ಲಿಯಾರ್, ಆದಂ ಸಹದಿ, ಆರಿಫ್ ಸಖಾಫಿ, ಸುಲೈಮಾನ್ ಸಹದಿ ಉಪಸ್ಥಿತರಿದ್ದರು.