ಮಡಿಕೇರಿ, ಅ. 18: ಮೃತದೇಹ ಛೇದನೆ ಮೂಲಕ ಕಲಿಯುವದು ವೈದ್ಯಕೀಯ ಶಾಸ್ತ್ರದ ಒಂದು ಭಾಗವಾಗಿದೆ ವಿದ್ಯಾರ್ಥಿಗಳು ಮೊದಲ ವರ್ಷದ ಎಂ.ಬಿ.ಬಿ.ಎಸ್.ಗೆ ದಾಖಲಾದಾಗ ಅವರಿಗೆ ಹೆಚ್ಚಿನ ಸಮಯದಲ್ಲಿ ಅಂಗ ರಚನಾ ಶಾಸ್ತ್ರದ ಅಂಗಛೇದನಾ ಕೊಠಡಿಯಲ್ಲಿ ತರಬೇತಿ ನೀಡಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಹಲವಾರು ವೈದ್ಯಕೀಯ ಕಾಲೇಜುಗಳಲ್ಲಿ ತೆರೆಯಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳ ಕಲಿಕೆಗಾಗಿ ತುಂಬಾ ಮಾನವ ಶವಗಳ ಅಗತ್ಯವಿರುತ್ತದೆ. ಕಂಪ್ಯೂಟರ್ ಆಧಾರಿತ ಚಿತ್ರಗಳು ಅಥವಾ ಮಾಡಲ್‍ಗಳನ್ನು ಉಪಯೋಗಿಸಿ ಭೋದಿಸುವದರಿಂದ ವಿದ್ಯಾರ್ಥಿಗಳಿಗೆ ಆಯಾಯ ಅಂಗಗಳನ್ನು ಮುಟ್ಟಿದ ಅನುಭವ ಅಥವಾ ಬೇರೆ ಬೇರೆ ಮಾನವನ ದೇಹದಲ್ಲಿರುವ ವೈವಿದ್ಯತೆ ಅರಿವಿಗೆ ಬರುವದಿಲ್ಲ. ಆದ್ದರಿಂದ ಸ್ವಯಂ ಪ್ರೇರಿತ ದೇಹದಾನವು ಮುಂದಿನ ಪೀಳಿಗೆಯ ವೈದ್ಯರಿಗೆ ಅಮೂಲ್ಯ ವರದಾನವಾಗಿದೆ.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕರ್ನಾಟಕ ಅಕಾಡೆಮಿ ಕಾಯ್ದೆ 1953 ಪ್ರಕಾರ ಸ್ವಯಂ ಪ್ರೇರಿತ ದಾನಿಗಳಿಂದ ದೇಹವನ್ನು ದಾನವಾಗಿ ಪಡೆಯಲಾಗುತ್ತದೆ. ದೇಹದಾನಗಳ ಅರ್ಜಿಯನ್ನು ಕಾಲೇಜಿನ ವೆಬ್‍ಸೈಟ್ ತಿತಿತಿ.ಞimsಞoಜsgu.ಞಚಿಡಿ.ಟಿiಛಿ.iಟಿನಲ್ಲಿ ದೊರಕುತ್ತವೆ. ದೇಹದಾನಿಗಳು ಈ ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿಮಾಡಿ ಅರ್ಜಿಯೊಂದಿಗೆ ದಾನಿಗಳ 2 ಭಾವಚಿತ್ರ ಮತ್ತು ಸರ್ಕಾರಿ ಗುರುತಿನ ಚೀಟಿಯೊಂದಿಗೆ ಅಂಗರಚನಾ ಶಾಸ್ತ್ರ ವಿಭಾಗ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಇಲ್ಲಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದಾನಿಗಳು ಕಾಲೇಜು ಕಚೇರಿ ದೂರವಾಣಿ ಸಂಖ್ಯೆ 08272-298220ಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ಸಂಪರ್ಕಿಸಬಹುದು ಎಂದು ಡೀನ್ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.