ಶನಿವಾರಸಂತೆ, ಅ. 18: ಶನಿವಾರಸಂತೆ 1ನೇ ವಿಭಾಗದ ಗಣಪತಿ ದೇವಾಲಯದಲ್ಲಿ ಪೂಜೆ, ಪ್ರಾರ್ಥನೆಯೊಂದಿಗೆ ಸರ್ವ ಧರ್ಮದ ನೂರಾರು ಮಂದಿ ಮೆರವಣಿಗೆಯ ಮೂಲಕ ಶ್ರೀ ಬೀರ ಲಿಂಗೇಶ್ವರ ಪುರಾತನ ದೇವಾಲಯದ ಕಟ್ಟಡಕ್ಕೆ ಆಗಮಿಸಿದರು. ಬೀರ ಲಿಂಗೇಶ್ವರ ಪ್ರಬಲ ಭೈರವಿ ಪರಿವಾರ ದೇವರುಗಳ ಪುರಾತನ ಕಟ್ಟಡದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಹೆಚ್. ಮಹಮ್ಮದ್ ಗೌಸ್ ಭೂಮಿಪೂಜೆ ನೆರವೇರಿಸಿದರು.

ಬೀರ ಲಿಂಗೇಶ್ವರ ಕಟ್ಟಡದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಅಂದಾಜು ರೂ. 3-4 ಲಕ್ಷ ಖರ್ಚಾಗಬಹುದು. ಜೀರ್ಣೋದ್ಧಾರ ಕಾರ್ಯ ಮುಗಿದ ಮೇಲೆ ಡಿಸೆಂಬರ್ 8-9 ರಂದು ಪೂಜಾ ಕೈಂಕರ್ಯಗಳು ಮಂಗಳೂರಿನ ಶ್ರೀ ರಂಗ ಐತ್ತಾಳ ನೇತೃತ್ವದಲ್ಲಿ ನೆರವೇರಲಿದೆ ಎಂದು ಗಣಪತಿ ದೇವಾಲಯದಲ್ಲಿ ಕರೆಯಲಾದ ಸಭೆಯಲ್ಲಿ ದೇವಾಲಯದ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್ ಹೇಳಿದರು.

ಸಭೆಯಲ್ಲಿ ಶ್ರೀ ರಾಮ ಮಂದಿರ ದೇವಾಲಯದ ಅಧ್ಯಕ್ಷ ಅರವಿಂದ್, ಸಮಿತಿ ಸದಸ್ಯರುಗಳಾದ ಬಿ.ಕೆ. ಚಂದ್ರು, ಎಸ್.ಪಿ. ರವಿ, ಜಗದೀಶ್, ಎನ್.ಎಂ. ಚಂದ್ರಶೇಖರ್, ಮಸೀದಿ ಅಧ್ಯಕ್ಷ ಅಕ್ಮಲ್, ಸರ್ದಾರ್ ಅಹ್ಮದ್, ಮಹಮದ್ ಪಾಶಾ, ಬಶೀರ್ ಅಹ್ಮದ್, ಬಿ.ಟಿ. ರಂಗಸ್ವಾಮಿ, ಸ್ನೇಕ್ ನಾಗ, ಕೆ.ಬಿ. ಹಾಲಪ್ಪ, ಸಿ.ಜೆ. ಗಿರೀಶ್, ಎಸ್.ಇ. ಮಹೇಶ್, ಎಸ್.ಎಸ್. ಮಹೇಶ್, ಕಾರ್ತಿಕ್ ಹರಿರಾವ್, ಎಸ್.ಎಂ. ಮಹೇಶ್, ದಿವಾಕರ್, ಕಾಂತರಾಜ್, ಯತೀಶ್, ಹರೀಶ್, ಕಿರಣ್, ಮಲ್ಲೇಶ್, ಸೌಭಾಗ್ಯಲಕ್ಷ್ಮಿ, ಸುರೇಶ್, ಶಿವರಾಜ್ ಹಾಗೂ ಎಲ್ಲಾ ಧರ್ಮ-ಜನಾಂಗದವರು ಭಾಗವಹಿಸಿದ್ದರು. ಎನ್.ಬಿ. ರವಿ ಸ್ವಾಗತಿಸಿ, ನಿವೃತ್ತ ಪೊಲೀಸ್ ದಿವಾಕರ್ ವಂದಿಸಿದರು.