ಸುಂಟಿಕೊಪ್ಪ, ಅ. 18: ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ವಿಜಯಾ ಬ್ಯಾಂಕಿನ ಸಿಬ್ಬಂದಿಗಳಿಗೆ ಹೋಬಳಿ ಮೊಗೇರಾ ಸೇವಾ ಸಮಾಜದ ವತಿಯಿಂದ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸ್ಥಳೀಯ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕಳೆದ ಆಗಸ್ಟ್‍ನಲ್ಲಿ ನಡೆದ ಜಲ ಪ್ರಳಯದಲ್ಲಿ ಭೂಮಿ ಮನೆ ಎಲ್ಲವನ್ನು ಕಳೆದು ಕೊಂಡು ತತ್ತರಿಸಿ ಹೋಗಿದ್ದ ನಿರಾಶ್ರಿತರಿಗೆ ಮೊದಲ ಬಾರಿಗೆ ಆಶ್ರಯ ನೀಡಿ ಅವರಿಗೆ ಬೇಕಾದ ಊಟೋಪಚಾರವನ್ನು ನೀಡಿ ಸಹಾಯಹಸ್ತ ಚಾಚಿ ಆಶ್ರಯ ಒದಗಿಸುವಲ್ಲಿ ಶ್ರಮಿಸಿದ ವಿಜಯಾ ಬ್ಯಾಂಕಿನ ವ್ಯವಸ್ಥಾಪಕ ಸಂದೀಪ್ ಲೋಚಬ್, ಉಪ ವ್ಯವಸ್ಥಾಪಕ ಹೆಚ್.ಡಿ. ರಂಗರಾಜು, ಬ್ಯಾಂಕಿನ ಅಧಿಕಾರಿಗಳಾದ ಸತೀಶ್, ರಾಜೇಂದ್ರಕುಮಾರ್, ರವಿ, ನೌಕರರಾದ ದರ್ಶನ್, ಸಂತೋಷ್, ಇವರಿಗೆ ಹಾರ ಹಾಕಿ ಅಭಿನಂದಿಸಲಾಯಿತು.
ಈ ಸಂದರ್ಭ ಮೊಗೇರಾ ಸಂಘದ ಜಿಲ್ಲಾ ನಿರ್ದೇಶಕ ಪಿ.ಬಿ. ಮಂಜು, ನಾಕೂರು ಘಟಕದ ಅಧ್ಯಕ್ಷ ಸೀತಾರಾಮ, ಸುಂಟಿಕೊಪ್ಪ ಘಟಕದ ಉಪಾಧ್ಯಕ್ಷ ಸಂಜೀವ, ಖಜಾಂಚಿ, ಅನಿಲ್‍ಕುಮಾರ್, ಸಲಹೆಗಾರ ಐತ್ತಪ್ಪ, ಪದಾಧಿಕಾರಿಗಳಾದ ಪಿ. ಮಂಜು, ರಾಮಚಂದ್ರ, ಜಿನ್ನಪ್ಪ, ರಕ್ಷಿತ್, ಐತಪ್ಪ, ಸುಭಾಷ್, ಸತೀಶ್ ಇತರರು ಇದ್ದರು.