ಚೆಟ್ಟಳ್ಳಿ, ಅ. 17: ಕೊಡವ ಭಾಷೆಯ ಮೊದಲ ಮಕ್ಕಳ ಚಲನಚಿತ್ರ ‘ಮಕ್ಕಡ ಮನಸ್ಸ್’ ಚಿತ್ರೀಕರಣ ಕೊಡಗಿನಲ್ಲಿ ಆರಂಭವಾಗಿದೆ. ಚಿತ್ರ ತಂಡ ವೀರಾಜಪೇಟೆಯ ಗಣಪತಿ ದೇವಾಲಯಲ್ಲಿ ಪೂಜೆ ಸಲ್ಲಿಸಿ ವೀರಾಜಪೇಟೆಯ ಸೆಂಟ್ ಆ್ಯನ್ಸ್ ಶಾಲೆಯಲ್ಲಿ ಶಾಸಕ ಕೆ.ಜಿ ಬೋಪಯ್ಯ ಹಾಗೂ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ವಿಠಲ ನಾಣಯ್ಯ ಚಲನಚಿತ್ರಕ್ಕೆ ಚಾಲನೆ ನೀಡಿದರು.
ಕುಟುಂಬದಲ್ಲಿ ಸೋಲು-ಗೆಲುವಿನ ನಡುವೆ ಎಷ್ಟೇ ಕಷ್ಟ ಬಂದರೂ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸದೆ ವಿದ್ಯಾವಂತರಾಗಿ ಬದುಕು ಕಟ್ಟಿಕೊಳ್ಳುವ ಕಥೆ ಆಧಾರಿತ ಮಕ್ಕಳ ಚಲನ ಚಿತ್ರವಾಗಿದ್ದು ಕೊಡವ ಹಾಗೂ ಕನ್ನಡ ಭಾಷೆಯ ಬಳಕೆಯೊಂದಿಗೆ ಚಲನಚಿತ್ರವನ್ನು ತಯಾರಿಸಲಾಗುತ್ತಿದೆ.
ಹಲವು ಚಲನ ಚಿತ್ರಗಳನ್ನು ನಿರ್ದೇಶಿಸಿ, ನಟಿಸಿರುವ ಕಲಾವಿದರಾದ ಕೊಟ್ಟ್‍ಕತ್ತಿರ ಪ್ರಕಾಶ್ ಕಾರ್ಯಪ್ಪ, ವಾಂಚಿರ ವಿಠಲ್ ನಾಣಯ್ಯ, ನೆರವಂಡ್ ಉಮೇಶ್, ತೇಲಪಂಡ ಪವನ್, ಚೆಡಿಯಂಡ ಸಂತೋಷ್ ಮೇದಪ್ಪ, ಬೊಳಿಯಾಡಿರ ದಕ್ಷಿತಾ, ಮುಕ್ಕಾಟಿರ ಗಗನ, ವಿನುತಾ, ತಾತಂಡÀ ಪ್ರಭಾ ನಾಣಯ್ಯ, ಅಡ್ಡಂಡ ಅನಿತಾ ಕಾರ್ಯಪ್ಪ, ಚೆರವೋಳಂಡ ಸುಜಾ ನಾಣಯ್ಯ, ಮಕ್ಕಳ ಪಾತ್ರದಲ್ಲಿ ವರುಣ್‍ಗೌಡ ನಟಿಸಲಿದ್ದು, ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಬರೆದಿರುವ ಚಿತ್ರಕಥೆಗೆ ನಿರ್ಮಾಪಕ ಗಂಗಾಧರ್, ನಿರ್ದೇಶಕ ಸುಲೇಮಾನ್ ಕೆ. ಜಾರ್ಜ್, ಛಾಯಾಗ್ರಹಣ ಪಿ.ಕೆ.ಹೆಚ್. ದಾಸ್‍ಸ್ಕ್ರಿಪ್ಟರ್ ಗಯಾeóï ಕುಶಾಲ್ ಮಾಡಲಿದ್ದಾರೆ.
ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, 40 ಮಕ್ಕಳು ಭಾಗಿಯಾಗಿರುವ ಚಲನಚಿತ್ರದಲ್ಲಿ ವೀರಾಜಪೇಟೆ ಸೆಂಟೆ ಆ್ಯನ್ಸ್ ಶಾಲೆ, ಕಕ್ಕಬೆ, ಮಡಿಕೇರಿ ಸುತ್ತಲು ಶೂಟಿಂಗ್ ನಡೆಯಲಿದ್ದು, ಜನವರಿಯಲ್ಲಿ ತೆರೆಗೆ ಬರಲಿದೆ.