ವೀರಾಜಪೇಟೆ, ಅ. 17: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಚುನಾವಣೆಗಾಗಿ ವಿವಿಧ ರಾಜಕೀಯ ಪಕ್ಷಗಳು, ಪಕ್ಷೇತರರು ಸೇರಿ ಒಟ್ಟು 65 ನಾಮಪತ್ರಗಳನ್ನು ಸಲ್ಲಿಸಲಾಗಿದ್ದು, ಇಂದು ನಾಮಪತ್ರಗಳ ಪರಿಶೀಲನೆ ಸಂದರ್ಭದಲ್ಲಿ ಎರಡು ನಾಮಪತ್ರಗಳು ತಿರಸ್ಕøತಗೊಂಡುದರಿಂದ 63 ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ.
ಪಟ್ಟಣ ಪಂಚಾಯಿತಿಯ ಹದಿನೆಂಟು ಸ್ಥಾನಗಳಿಗಾಗಿ ತಾ. 28ರಂದು ಚುನಾವಣೆ ನಡೆಯಲಿದ್ದು ನಾಮಪತ್ರಗಳು ಅಧಿಕವಾದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಆರ್. ಗೋವಿಂದರಾಜು ಅವರ ನೇತೃತ್ವದಲ್ಲಿ ವಾರ್ಡ್ ನಂಬರ್ ಒಂದರಿಂದ 9ರ ತನಕ, 9 ವಾರ್ಡ್‍ಗಳ ನಾಮಪತ್ರ ಪರಿಶೀಲನೆ ನಡೆದರೆ 10ರಿಂದ 18ರ ವರೆಗಿನ 9 ವಾರ್ಡ್‍ಗಳ ನಾಮಪತ್ರ ಪರಿಶೀಲನೆ ಚಾಲ್ರ್ಸ್ ಡಿಸೋಜ ಅವರ ನೇತೃತ್ವದಲ್ಲಿ ನಡೆಯಿತು.
ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ನಾಮಪತ್ರ ಪರಿಶೀಲನೆಯಲ್ಲಿ, ವಾರ್ಡ್ ನಂಬರ್ 2ರಲ್ಲಿ ಬಿಜೆಪಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಪಿ.ವಿಷ್ಣು ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸ್ಥಳೀಯ ವಿಳಾಸ ನೀಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ಆರ್.ಕೆ.ಅಬ್ದಲ್ ಸಲಾಂ ಅವರು ಲಿಖಿತವಾಗಿ ಸಲ್ಲಿಸಿದ ಆಕ್ಷೇಪಣೆಯನ್ನು ಸಹಾಯಕ ಚುನಾವಣಾಧಿಕಾರಿ ಗೋವಿಂದರಾಜು ಅವರು ಕಾನೂನುಬದ್ಧವಾಗಿ ಪರಿಶೀಲಿಸಿ ನಂತರ ಈ ನಾಮಪತ್ರ ಕ್ರಮಬದ್ಧ ಎಂದು ಘೋಷಿಸಿದರು. ಇದೇ ವಾರ್ಡ್‍ಗೆ ಪರ್ಯಾಯವಾಗಿ ಅಭ್ಯರ್ಥಿ ವಿಷ್ಣುವಿನ ಜತೆಯಲ್ಲಿ ಒಂದೇ ಬಿ.ಫಾರಂನಲ್ಲಿ ಬಿಜೆಪಿಯಿಂದ ನಾಮಪತ ್ರಸಲ್ಲಿಸಿದ್ದ ಪಿ.ಎ.ರಾಜೇಶ್ ಅವರು ಮೂರು ಮಂದಿ ಸೂಚಕರನ್ನು ನಮೂದಿಸಿಲ್ಲ ಎಂಬ ಕಾರಣಕ್ಕಾಗಿ ನಾಮಪತ್ರವನ್ನು ತಿರಸ್ಕರಿಸಲಾಯಿತು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಹದಿನೇಳನೇ ವಾರ್ಡ್‍ನ ಮೈಕ್ರೋವೇವ್‍ನಿಂದ ಜೆಡಿಎಸ್ ಪಕ್ಷದಿಂದ ಸ್ಫರ್ಧಿಸಲು ನಾಮಪತ್ರ ಸಲ್ಲಿಸಿದ್ದ ಎಚ್.ಜಿ.ಸರೋಜ ನಾಮಪತ್ರದಲ್ಲಿ ಪಕ್ಷದ ಹೆಸರನ್ನು ನಮೂದಿಸಿದ್ದರೂ ಪಕ್ಷದ ಬಿ.ಫಾರಂ ಸಲ್ಲಿಸಲಿಲ್ಲ. ಮೂರು ಮಂದಿ ಸೂಚಕರ ಹೆಸರಿರಲಿಲ್ಲ ಎಂಬ ಕಾರಣಕ್ಕಾಗಿ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಸಹಾಯಕ ಚುನವಣಾಧಿಕಾರಿ ಚಾಲ್ರ್ಸ್ ಡಿಸೋಜಾ ತಿಳಿಸಿದರು.
ನಾಮಪತ್ರಗಳ ಪರಿಶೀಲನೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಿದವರ ಪರವಾಗಿ ಬಿ.ಆರ್.ಶೆಟ್ಟಿ, ಡಿ.ಸಿ.ಧ್ರುವ, ಎನ್.ವಿ.ನರೇಂದ್ರ, ಪಿ.ಎ.ಪೊನ್ನಣ್ಣ, ರಫೀಕ್, ರೀನಾ ಪ್ರಕಾಶ್, ಎಂ.ಎಸ್.ಪೂವಯ್ಯ, ಬಿ.ಎಂ.ಆಯ್ಯಪ್ಪ ಹಾಜರಿದ್ದರು. ವಿವಿಧ ರಾಜಕೀಯ ಪಕ್ಷಗಳ ಪರವಾಗಿ ಬಿಜೆಪಿಯಿಂದ ಪಿ.ರಘು ನಾಣಯ್ಯ, ಅರುಣ್ ಭೀಮಯ್ಯ, ಮಧುದೇವಯ್ಯ, ಎ.ಅನಿಲ್ ಕಾಂಗ್ರೆಸ್ ಪಕ್ಷದಿಂದ ಆರ್.ಕೆ.ಅಬ್ದುಲ್ ಸಲಾಂ, ವಿ.ಕೆ.ಸತೀಶ್, ಜೆಡಿಎಸ್ ಪಕ್ಷದಿಂದ ಎಸ್.ಎಚ್.ಮತೀನ್ ಮತ್ತಿತರರು ಹಾಜರಿದ್ದರು.
ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ನಿನ್ನೆ ದಿನ ಪಕ್ಷೇತರರು 22, ಕಾಂಗ್ರೇಸ್ 14, ಬಿಜೆಪಿ 19, ಸಿಪಿಐ (ಎಂ) 1 ಜೆ.ಡಿಎಸ್ 5 ಹಾಗೂ ಎಸ್‍ಡಿಪಿಐ 4 ಸೇರಿದಂತೆ 65 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರ ಪರಿಶೀಲನೆಯ ಎರಡು ಕಡೆಗಳಲ್ಲಿಯೂ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.