ನಾಪೆÇೀಕ್ಲು, ಅ. 17: ಆಧ್ಯಾತ್ಮಿಕ ವಿದ್ಯೆಯಿಂದ ಕುಟುಂಬ ಮತ್ತು ಸಮಾಜದಲ್ಲಿ ಉಂಟಾಗಬಹುದಾದ ಸಂಕಷ್ಟಗಳನ್ನು ಎದುರಿಸಲು ಸಾಧ್ಯ. ವಿದ್ಯಾರ್ಥಿಗಳು ಹೆಚ್ಚು ಯೋಗ, ಧ್ಯಾನದಲ್ಲಿ ತಮ್ಮನ್ನು ತೊಡಗಿಸಿ ಳ್ಳಬೇಕೆಂದು ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಮತ್ತು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾಪೆÇೀಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸ ಲಾಗಿದ್ದ ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ಸಮಸ್ಯೆ ಉಂಟಾದಾಗ ಮನಸ್ಸು ದುರ್ಬಲ ವಾಗಬಾರದು. ಮನಸ್ಸನ್ನು ಗಟ್ಟಿ ಮಾಡುವಂತಹ ವಿದ್ಯೆಯನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದರು. ಜೀವನ ಏನೆಂಬುದನ್ನು ಕಲಿಯಲು ಮಾನಸಿಕವಾಗಿ ನಿಮ್ಮ ಮನಸ್ಸನ್ನು ನೀವೆ ಗೆಲ್ಲಲು ಪ್ರಯತ್ನಿಸಬೇಕು. ಮನಸ್ಸನ್ನು ನಿಯಂತ್ರಿಸುವ ಕಲೆಯನ್ನು ರೂಪಿಸಿಕೊಳ್ಳಬೇಕು. ಆದರೆ ಮಾತ್ರ ಉತ್ತಮ ನಾಯಕನಾಗಿ ಬೆಳೆಯಲು ಸಾಧ್ಯ ಎಂದರು. ಮಾನಸಿಕ ಚೈತನ್ಯ, ಶಕ್ತಿ ಇದ್ದರೆ ಕಷ್ಟದಲ್ಲಿಯೂ ಸಂತಸದಿಂದ ಇರಬಹುದು. ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಶಿಸ್ತನ್ನು ಅಳವಡಿಸಿಕೊಂಡರೆ ಮಾತ್ರ ಉತ್ತಮ ನಾಯಕತ್ವ ಗುಣ ಬೆಳೆಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬಹುದಾಗಿದೆ ಎಂದರು.

ಕೊಡಗಿನಲ್ಲಿ ಇತ್ತೀಚೆಗೆ ನಡೆದ ಪ್ರಕೃತಿ ವಿಕೋಪ, ದುರಂತವನ್ನು ವಿವರಿಸಿದ ಅವರು ತಮ್ಮ ಪೂರ್ವಜರು ಸಂಪಾದಿಸಿದ ಆಸ್ತಿ ಅಂತಸ್ತನ್ನು ಅವಲಂಬಿಸದೆ ತಮ್ಮ ಬದುಕನ್ನು ತಾವೇ ಕಟ್ಟಿಕೊಂಡರೆ ಇಂತಹ ಪ್ರಕೃತಿ ವಿಕೋಪದಲ್ಲಿ ಉಂಟಾಗುವ ಸಮಸ್ಯೆಗಳನ್ನು ಸ್ವಲ್ಪ ಮಟ್ಟಿಗೆ ನಿವಾರಿಸಬಹುದು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಪಿ.ಎಲ್.ಡಿ ಬ್ಯಾಂಕ್‍ನ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಕೊಡಗು ಜಿಲ್ಲೆ ತನ್ನದೇ ಆದ ಆಚಾರ -ವಿಚಾರ, ಪದ್ಧತಿ - ಪರಂಪರೆಗಳನ್ನು ಹೊಂದಿದೆ. ಸೈನ್ಯ, ಕ್ರೀಡೆ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಕೊಡಗು ಮುಂಚೂಣಿಯಲ್ಲಿದೆ. ಅದು ಈ ಮಣ್ಣಿನ, ನೀರಿನ ಗುಣದಿಂದ ಸಾಧ್ಯವಾಗಿದೆ. ಎಲ್ಲರೂ ನಾಯಕತ್ವ ಗುಣ ಬೆಳೆಸಿಕೊಳ್ಳುವದರೊಂದಿಗೆ ಸ್ವಚ್ಛತೆಯ ಕಡೆಗೆ ಗಮನಹರಿಸಬೇಕು ಎಂದರು.

ನಾಪೆÇೀಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್ ಮಾತನಾಡಿ ವಿದ್ಯಾರ್ಥಿಗಳು ಮನುಷ್ಯ - ಮನುಷ್ಯನಿಗೆ ಗೌರವ ನೀಡುವ ಕೆಲಸವನ್ನು ಮಾಡಬೇಕು. ಇದಕ್ಕೆ ಪ್ರಾಥಮಿಕ ಶಿಕ್ಷಣದಲ್ಲಿಯೇ ಮೌಲ್ಯಯುಕ್ತ ಶಿಕ್ಷಣ ನೀಡಲು ಶಿಕ್ಷಕರು, ಪೆÇೀಷಕರು ಪ್ರಯತ್ನಿಸಬೇಕು ಎಂದರು. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಬಾಹ್ಯ ಪ್ರಪಂಚದ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಕೆಸರಿನ ಕಮಲದಂತೆ ಅರಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಜಿ.ಮಾದಪ್ಪ ಮಾತನಾಡಿ ಭಾಷೆ, ವಿದ್ಯೆ ಮತ್ತು ರಕ್ತಕ್ಕೆ ಯಾವದೇ ಜಾತಿಯಿಲ್ಲ. ವಿದ್ಯಾಸಂಸ್ಥೆಗಳಲ್ಲಿ ಜಾತಿಯ ವಿಷ ಬೀಜ ಬಿತ್ತುವ ಕೆಲಸವನ್ನು ಯಾರೂ ಮಾಡಬಾರದು. ನಮ್ಮ ಸಂಸ್ಥೆಯ ವತಿಯಿಂದ ಮುಕ್ಕೋಡ್ಲು ವಿಭಾಗದಲ್ಲಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ 5 ಲಕ್ಷ ರೂ. ಗಳನ್ನು ಸಹಾಯವಾಗಿ ನೀಡಲಾಗಿದೆ. ನಮ್ಮ ವಿದ್ಯಾಸಂಸ್ಥೆಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಎಲ್ಲಾ ಅನುಕೂಲತೆಗಳನ್ನು ಕಲ್ಪಿಸಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಬಡುವಂಡ ಸುಬ್ರಮಣಿ, ಗೌರವ ಕಾರ್ಯದರ್ಶಿ ಚೌರೀರ ಪೆಮ್ಮಯ್ಯ, ಎಲ್ಲಾ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕ ವೃಂದ ಹಾಜರಿದ್ದರು. ಶಿಬಿರಾರ್ಥಿಗಳಿಂದ ಪ್ರಾರ್ಥನೆ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ.ದೇವಕಿ ಸ್ವಾಗತ, ಎನ್.ಎಸ್.ಎಸ್ ಸಂಯೋಜನಾಧಿಕಾರಿ ಯು.ಸಿ. ಮಾಲತಿ ವರದಿ ವಾಚಿಸಿ ಪಿ.ಪಿ.ಶ್ರೀರಕ್ಷಾ ನಿರೂಪಿಸಿ, ಉಪನ್ಯಾಸಕಿ ಎ.ಡಿ.ರೋಹಿಣಿ ವಂದಿಸಿದರು.