ನಾಪೋಕ್ಲು, ಅ. 17: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾಗಮಂಡಲ ಘಟಕದ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಕೋರಂಗಾಲದ ಸಮುದಾಯ ಭವನ ನಿರ್ಮಾಣ ಮಾಡಲು ಮಂಜೂರಾಗಿರುವ ಹಣ 1.5 ಲಕ್ಷ ರೂಗಳನ್ನು ಯೋಜನಾಧಿಕಾರಿ ಸದಾಶಿವ ಗೌಡ ಆಡಳಿತ ಮಂಡಳಿ ಸದಸ್ಯರಿಗೆ ಹಸ್ತಾಂತರಿಸಿದರು. ವಲಯದ ಮೇಲ್ವಿಚಾರಕ ಚೇತನ್, ಸೇವಾ ಪ್ರತಿನಿಧಿಗಳಾದ ವೆಂಕಟರಮಣ ಅಣ್ಣಯ್ಯ, ಹಾಗೂ ಸೇವಾ ಸಮಿತಿಯ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.