ಸುಂಟಿಕೊಪ್ಪ,ಅ.17: ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ತಾ.18 ರಂದು (ಇಂದು) ಸಂಘದ ಕಚೇರಿಯ ಮುಂಭಾಗದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮೂಹಿಕ ಆಯುಧಾ ಪೂಜಾ ಸಮಾರಂಭ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸಂತೋಷ್ ದಿನು ತಿಳಿಸಿದರು.

ವಿವಿಧ ಧರ್ಮಗಳ ಮುಖಂಡರುಗಳು ಪ್ರವಚನ ನೀಡಲಿದ್ದು, ಜಿ.ಪಂ.,ತಾ.ಪಂ.ಸದಸ್ಯರುಗಳು, ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಉಪಸ್ಥಿತರಿರುವರು ಎಂದರು.

ಇತ್ತೀಚೆಗೆ ಅಪಘಾತದಲ್ಲಿ ಮೃತರಾದ ಸಮೀಪದ ಹೊಸತೋಟದ ಆಟೋ ಚಾಲಕ ಗಣೇಶ್ ಅವರ ಮನೆಯವರಿಗೆ ಸಂಘದ ವತಿಯಿಂದ ಪರಿಹಾರ ಧನವನ್ನು ವಿತರಿಸಲಾಗುವದು. ಇದರಿಂದಾದರೂ ಮೃತ ಗಣೇಶ್ ಕುಟುಂಬಕ್ಕೆ ದಾನಿಗಳು ಸಹಾಯ ಮಾಡಲು ಮುಂದೆ ಬರಲಿ ಎಂಬ ನಿಟ್ಟಿನಲ್ಲಿ ಸಮಾರಂಭದ ವೇದಿಕೆಯಲ್ಲಿ ವಿತರಿಸುತ್ತಿದ್ದೇವೆ ಎಂದು ಸಂತೋಷ್ ತಿಳಿಸಿದರು. ಸಂಘದ ಕಾರ್ಯದರ್ಶಿ ಪ್ರಶಾಂತ್,ಉಪಾಧ್ಯಕ್ಷ ವಿಶ್ವನಾಥ್, ಖಜಾಂಚಿ ಸಿಕಂದರ್ ಇದ್ದರು.