ಶನಿವಾರಸಂತೆ, ಅ. 17: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಬುಧವಾರ ಆಯುಧ ಪೂಜೆ ಪ್ರಯುಕ್ತ ಹೂವಿನ ವ್ಯಾಪಾರ ಬಿರುಸಾಗಿ ನಡೆದಿತ್ತು. ಸ್ಥಳೀಯ ವ್ಯಾಪಾರಿ ಗಳೊಂದಿಗೆ ಅರಕಲಗೂಡಿನಿಂದ ಬಂದಿದ್ದ ವ್ಯಾಪಾರಿಗಳು ಪೈಪೋಟಿ ನಡೆಸುವ ರೀತಿಯಲ್ಲಿ ಹೂ ಮಾರಾಟದ ಭರಾಟೆ ಜೋರಾಗಿತ್ತು.
ಸಾಮಾನ್ಯವಾಗಿ ಹಬ್ಬದ ಹಿಂದಿನ ದಿನ ಸ್ಥಳೀಯ ವ್ಯಾಪಾರಿಗಳು ಅಧಿಕ ಬೆಲೆಗೆ ಹೂ ಮಾರಾಟ ಮಾಡುವದು ರೂಢಿಯಾಗಿತ್ತು. ವಿಧಿಯಿಲ್ಲದೆ ಗ್ರಾಹಕರು ವ್ಯಾಪಾರಿಗಳು ಹೇಳಿದಷ್ಟು ಬೆಲೆತೆತ್ತು ಖರೀದಿಸುತ್ತಿದ್ದರು. ಈ ಬಾರಿ ಅರಕಲಗೂಡಿನಿಂದ ಬಂದ 25-30 ವ್ಯಾಪಾರಿಗಳು ವೃತ್ತದಲ್ಲಿ ಕುಳಿತು ರೂ. 40 ರಿಂದ 70ರ ಬೆಲೆಯಲ್ಲಿ ಹೂ ಹಾಗೂ ರೂ. 70-80ರ ಬೆಲೆಯಲ್ಲಿ ಬೂದುಕುಂಬಳಕಾಯಿ ಮಾರುತ್ತಿದ್ದು ಗ್ರಾಹಕರನ್ನು ಸೆಳೆಯುತ್ತಿದ್ದ ದೃಶ್ಯ ಕಂಡು ಬಂದಿತು.
ಆಯುಧಪೂಜೆ, ಮರುದಿನ ವಿಜಯದಶಮಿ ಪ್ರಯುಕ್ತ ಹೂವಿನ ಬೇಡಿಕೆ ಹೆಚ್ಚಾಗಿತ್ತು. ಮನೆ, ಅಂಗಡಿ, ವಕ್ರ್ಸ್ ಶಾಪ್, ಗ್ಯಾರೇಜ್ ಹಾಗೂ ವಾಹನಗಳ ಅಲಂಕಾರಕ್ಕಾಗಿ ಜನತೆ ಹೂ ಹಾಗೂ ಬೂದು ಕುಂಬಳಕಾಯಿ ಖರೀದಿಸುತ್ತಿದ್ದರು.