ಕೂಡಿಗೆ, ಅ. 17: ಕೂಡಿಗೆಯ ಶ್ರೀ ದಂಡಿನಮ್ಮ ದೇವಾಲಯದ ಆವರಣದಲ್ಲಿ ದಂಡಿಕೇಶ್ವರಿ ನವರಾತ್ರಿ ಪೂಜಾ ಸಮಿತಿಯ ವತಿಯಿಂದ ನವರಾತ್ರಿ ಪೂಜೋತ್ಸವಗಳು ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಅರ್ಚಕ ರಾಘವೇಂದ್ರಾಚಾರ್ ಅವರ ನೇತೃತ್ವದಲ್ಲಿ ನಡೆದವು.
ದಂಡಿನಮ್ಮ ತಾಯಿಗೆ ವಿಶೇಷ ಪೂಜೆ, ಹೋಮ-ಹವನಗಳು, ಮಹಾಮಂಗಳಾರತಿ ನಂತರ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಪೂಜೋತ್ಸವದಲ್ಲಿ ಕೂಡಿಗೆ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಪಾಲ್ಗೊಂಡಿದ್ದರು.