ಕುಶಾಲನಗರ, ಅ. 17: ಕೊಡಗು ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಜಿಲ್ಲೆಯ ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್ ಮಾಲೀಕರು ಒಗ್ಗೂಡಿ ಶ್ರಮಿಸುತ್ತಿದ್ದಾರೆ ಎಂದು ಕೊಡಗು ಹೊಟೇಲ್, ರೆಸ್ಟೋರೆಂಟ್ ಆಂಡ್ ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ.

ಅವರು ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ವತಿಯಿಂದ ರೂ. 50 ಸಾವಿರ ದೇಣಿಗೆ ಸ್ವೀಕರಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿ, ಇತ್ತೀಚಿನ ಪ್ರಕೃತಿ ವಿಕೋಪದ ಬೆನ್ನಲ್ಲೇ ಜಿಲ್ಲೆಯ ಪ್ರವಾಸಿ ಕೇಂದ್ರಗಳು ಪ್ರವಾಸಿಗರ ಕೊರತೆ ಎದುರಿಸುತ್ತಿವೆ. ಈ ನಿಟ್ಟಿನಲ್ಲಿ ಕೊಡಗು ಹೊಟೇಲ್, ರೆಸ್ಟೋರೆಂಟ್ ಆಂಡ್ ರೆಸಾರ್ಟ್ ಅಸೋಸಿಯೇಷನ್ ಪಣತೊಟ್ಟಿದ್ದು ವಿನೂತನ ಕಾರ್ಯಕ್ರಮಗಳ ಮೂಲಕ ಪ್ರವಾಸಿಗರ ಗಮನ ಸೆಳೆಯಲು ಮುಂದಾಗಿರುವ ದಾಗಿ ಮಾಹಿತಿ ನೀಡಿದರು.

ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆಯ ಚಿತ್ರಣವೇ ಬದಲಾಗಿದ್ದು, ಪ್ರವಾಸೋದ್ಯಮ ಸಂಪೂರ್ಣವಾಗಿ ಏರುಪೇರಾಗುವದರೊಂದಿಗೆ ಇಡೀ ಜಿಲ್ಲೆಯ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ ಎಂದು ತಿಳಿಸಿರುವ ಅಸೋಸಿಯೇಶನ್ ಖಜಾಂಚಿ ಭಾಸ್ಕರ್, ತಮ್ಮ ಸಂಘದ ಸದಸ್ಯರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವ ನಿಟ್ಟಿನಲ್ಲಿ ಅಸೋಸಿಯೇಷನ್‍ಗೆ ಸಹಕಾರ ನೀಡಿದ ಎನ್‍ಟಿಸಿ ಸಂಸ್ಥೆಯ ವರ್ತಕರಿಗೆ ಅಭಿನಂದನೆ ಸಲ್ಲಿಸಿದರು.

ಎನ್.ಟಿ.ಸಿ ವರ್ತಕರಾದ ಅಂಚೆಮನೆ ಮುರಳಿ, ರಮೇಶ್, ಬಿನೀಷ್, ರಕ್ಷಿತ್ ಮತ್ತಿತರರು ಇದ್ದರು.