ವೀರಾಜಪೇಟೆ, ಅ. 16: ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಇಂದು ಜೆ.ಡಿ.ಎಸ್. ಕಾಂಗ್ರೆಸ್ ಬಿಜೆಪಿ, ಎಸ್.ಡಿ.ಪಿಐ, ಕಮ್ಯುನಿಸ್ಟ್ ಸಿ.ಪಿ.ಐ.ಎಂ. ಹಾಗೂ ಪಕ್ಷೇತರರು ವೀರಾಜಪೇಟೆ, ಅ. 16: ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಇಂದು ಜೆ.ಡಿ.ಎಸ್. ಕಾಂಗ್ರೆಸ್ ಬಿಜೆಪಿ, ಎಸ್.ಡಿ.ಪಿಐ, ಕಮ್ಯುನಿಸ್ಟ್ ಸಿ.ಪಿ.ಐ.ಎಂ. ಹಾಗೂ ಪಕ್ಷೇತರರು ಪಂಚಾಯಿತಿಯ ಹದಿನೆಂಟು ಸ್ಥಾನಗಳಿಗೆ ಭಾರತೀಯ ಜನತಾ ಪಾರ್ಟಿ ಎಲ್ಲ ಸ್ಥಾನಗಳಿಗೆ ಸ್ಪರ್ಧಿಸಿದರೆ, ಕಾಂಗ್ರೆಸ್ ಜನತಾದಳ ಹೊಂದಾಣಿಕೆ ಯಿಂದಾಗಿ ಜನತಾದಳ ನಾಲ್ಕು ವಾರ್ಡ್‍ಗಳಲ್ಲಿಯೂ, ಕಾಂಗ್ರೆಸ್ 14ವಾರ್ಡ್‍ಗಳಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದೆ.ಪಕ್ಷೇತರರು ವಾರ್ಡ್‍ಗಳಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾದುದರಿಂದ ತಾಲೂಕು ಕಚೇರಿ ಹಾಗೂ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಬೆಳಗ್ಗಿನ 10 ಗಂಟೆಯಿಂದಲೇ ಸರದಿ ಉಂಟಾಗಿತ್ತು. ಕಾರ್ಯಕರ್ತರ ನೂಕು ನುಗ್ಗಲನ್ನು ಪೊಲೀಸರು
(ಮೊದಲ ಪುಟದಿಂದ) ಪ್ರವೇಶ ದ್ವಾರದಲ್ಲಿ ತಡೆದರು. ಅಭ್ಯರ್ಥಿಯ ನಾಮಪತ್ರ ಸಲ್ಲಿಸಲು ಐದು ಮಂದಿಗೆ ಮಾತ್ರ ಪ್ರವೇಶಾವಕಾಶವಿತ್ತು.
ತಾ. 28ರಂದು ನಡೆಯುವ ಪಟ್ಟಣ ಪಂಚಾಯಿತಿ ಚುನಾವಣೆಗೆ ಒಟ್ಟು 22 ಮಂದಿ ಪಕ್ಷೇತರರು, ಬಿಜೆಪಿಯಿಂದ 19, ಕಾಂಗ್ರೆಸ್ 14, ಕಮ್ಯುನಿಸ್ಟ್ 1, ಜೆ.ಡಿ.ಎಸ್. 5 ಹಾಗೂ ಎಸ್.ಡಿ.ಪಿ.ಐ. 4 ಸೇರಿದಂತೆ ಒಟ್ಟು 65 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಜಾತ್ಯತೀತ ಜನತಾ ದಳದ ಪ್ರಮುಖ ಮೇರಿಯಂಡ ಸಂಕೇತ್ ಪೂವಯ್ಯ, ಯಾಲದಾಳು ಮನೋಜ್ ಬೋಪಯ್ಯ, ಎಸ್.ಎಚ್. ಮತೀನ್, ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ನಗರ ಸಮಿತಿ ಅಧ್ಯಕ್ಷ ಜಿ.ಜಿ. ಮೋಹನ್, ಬಿಜೆಪಿ ಪಕ್ಷದ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಮಧು ದೇವಯ್ಯ, ಜಿಲ್ಲಾ ಸಮಿತಿಯ ಪಟ್ರಪಂಡ ರಘು ನಾಣಯ್ಯ ಮತ್ತಿತರ ಪ್ರಮುಖರು ಹಾಜರಿದ್ದರು.
ಪಟ್ಟಣ ಪಂಚಾಯಿತಿಯ ಏಳು ಮತ್ತು ಎಂಟನೇ ವಾರ್ಡ್‍ಗೆ ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ ನಾಮಪತ್ರ ಸಲ್ಲಿಸಿದರೆ, ಮೂರನೇ ವಾರ್ಡ್‍ಗೆ ಮಾಜಿ ಅಧ್ಯಕ್ಷ ಸಚಿನ್ ಕುಟ್ಟಯ್ಯ 14ನೇ ವಾರ್ಡ್ ಮಾಜಿ ಅಧ್ಯಕ್ಷ ಇ.ಸಿ. ಜೀವನ್, ಮಾಜಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್ ಒಂದನೇ ವಾರ್ಡ್‍ಗೆ, ಪಟ್ಟಣ ಪಂಚಾಯಿತಿಗೆ ನಾಲ್ಕು ಬಾರಿ ಆಯ್ಕೆಯಾದ ಎಸ್.ಎಚ್. ಮೊೈನುದ್ದೀನ್ ಎರಡು ಬಾರಿ ಆಯ್ಕೆಯಾದ ಎಸ್.ಎಚ್. ಮತೀನ್ ಮರು ಆಯ್ಕೆಗಾಗಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರಗಳ ವಿವರ
ವಾರ್ಡ್‍ಸಂಖ್ಯೆ 1 ಚರ್ಚ್ ರಸ್ತೆ ಹಾಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್(ಬಿಜೆಪಿ), ಗೀತಾ (ಪಕ್ಷೇತರ) ಫಸಿಹಾ ತಬಸಮ್ (ಕಾಂಗ್ರೆಸ್), ವಾರ್ಡ್ ಸಂಖ್ಯೆ 2 ದೇವಾಂಗ ಬೀದಿ ಪಿ.ಎ. ರಂಜಿ ಪೂಣಚ್ಚ (ಕಾಂಗ್ರೆಸ್), ಸಿ.ಆರ್. ಅನೀಶ್ ಕುಮಾರ್ (ಪಕ್ಷೇತರ),ಪಿ ವಿಷ್ಣು(ಬಿಜೆಪಿ), ರಾಜೇಶ್ (ಬಿಜೆಪಿ), ವಾರ್ಡ್ ಸಂಖ್ಯೆ 3 ಅರಸುನಗರ ಟಿ.ಪಿ. ಕೃಷ್ಣ (ಪಕ್ಷೇತರ), ಡಿ.ಪಿ. ರಾಜೇಶ್ (ಕಾಂಗ್ರೆಸ್), ಸಚಿನ್ ಕುಟ್ಟಯ್ಯ (ಬಿಜೆಪಿ), ವಾರ್ಡ್‍ಸಂಖ್ಯೆ 4 ತೆಲುಗರ ಬೀದಿ, ಸುಶ್ಮಿತಾ ಟಿ. ಆರ್. (ಬಿಜೆಪಿ), ಹೆಚ್.ಪಿ. ಅನಿತಾ (ಕಾಂಗ್ರೆಸ್), ಹೆಚ್.ಎಂ. ಪೂವಿ (ಪಕ್ಷೇತರ), ವಾರ್ಡ್ ಸಂಖ್ಯೆ 5 ಮೊಗರಗಲ್ಲಿ ದರ್ಶನ್ ಎನ್(ಬಿಜೆಪಿ), ಅಲ್ತಫ್ (ಪಕ್ಷೇತರ), ಎಸ್.ವೈ. ಮುನಾವರ್,(ಪಕ್ಷೇತರ), ಎಸ್.ಎಚ್. ಮತೀನ್ (ಜೆಡಿಎಸ್), ಎಝಾಜ್ ಅಹಮದ್ (ಕಾಂಗ್ರೆಸ್), ಮಹಮದ್ ಶರೀಫ್ (ಎಸ್‍ಡಿಪಿಐ), ವಾರ್ಡ್‍ಸಂಖ್ಯೆ 6 ಹರಿಕೇರಿ ಗಜೇಂದ್ರ ಹೆಚ್‍ಆರ್ (ಬಿಜೆಪಿ), ಆರ್ಮುಗ (ಜೆಡಿಎಸ್), ಹೆಚ್.ಆರ್. ಶಿವಪ್ಪ (ಸಿಪಿಐಎಂ), ಸತೀಶ್ (ಪಕ್ಷೇತರ), ವಾರ್ಡ್ ಸಂಖ್ಯೆ 7 ನೆಹರುನಗರ 1 ಎಂ.ಕೆ. ದೇಚಮ್ಮ (ಪಕ್ಷೇತರ), ಬಿ.ಡಿ ಸುನೀತಾ (ಬಿಜೆಪಿ), ನಸೀಮಾ ಬಾನು (ಪಕ್ಷೇತರ), ಸುರಯ್ಯ (ಪಕ್ಷೇತರ), ರೆಹನಾ ಷಾ (ಎಸ್‍ಡಿಪಿಐ), ವಾರ್ಡ್ ಸಂಖ್ಯೆ 8 ನೆಹರುನಗರ 2 ಎಂ.ಕೆ. ದೇಚಮ ್ಮ(ಪಕ್ಷೇತರ), ಜೂಡಿ ವಾಝ್ (ಪಕ್ಷೇತರ), ಮೇರಿರಾಣಿ (ಬಿಜೆಪಿ), ಲೈಲಾ ಜೋಸೇಫ್ (ಪಕ್ಷೇತರ), ಅಗಸ್ಟಿನ್ (ಕಾಂಗ್ರೆಸ್), ವಾರ್ಡ್‍ಸಂಖ್ಯೆ 9 ಸುಭಾಷ್‍ನಗರ ಪ್ರತೀಪ್(ಬಿಜೆಪಿ), ವಿ.ಆರ್. ರಜನಿಕಾಂತ್(ಪಕ್ಷೇತರ), ಅಬ್ದುಲ್ ರೆಹಮಾನ್ (ಪಕ್ಷೇತರ), ಅಬ್ದುಲ್ ಖಾದರ್ (ಪಕ್ಷೇತರ), ಸೈಫುದ್ದಿನ್ ಎಂ.ಈ. (ಪಕ್ಷೇತರ), ರಫೀಕ್ ಕೆ.ಎ. (ಕಾಂಗ್ರೆಸ್), ಅಬ್ದುಲ್ ಶಾಕೀಲ್ (ಎಸ್‍ಡಿಪಿಐ), ಇಂತಿಯಾಸ್ ಅಹಮದ್ (ಎಸ್‍ಡಿಪಿಐ), ವಾರ್ಡ್ ಸಂಖ್ಯೆ 10 ನಿಸರ್ಗ ಬಡಾವಣೆ ಸ್ಯೆನಾಭ ರೆಹಮಾನ್ (ಪಕ್ಷೇತರ), ಅನಿತಾ (ಬಿಜೆಪಿ), ಪಿ ಸಿಂಧು (ಕಾಂಗ್ರೆಸ್), ವಾರ್ಡ್‍ಸಂಖ್ಯೆ 11 ಪಂಜರುಪೇಟೆ ಹೆಚ್,ಪಿ ಮಹಾದೇವ್ (ಬಿಜೆಪಿ), ಕೆ.ಬಿ ಪ್ರತಾಪ್ (ಕಾಂಗ್ರೆಸ್), ವಾರ್ಡ್‍ಸಂಖ್ಯೆ 12 ಮೀನುಪೇಟೆ 1 ಸಲೀಂ(ಬಿಜೆಪಿ), ಎಸ್.ಎಚ್ ಮ್ಯೊನುದ್ದಿನ್ (ಜೆಡಿಎಸ್), ಅಬ್ದುಲ್ ಜಲೀಲ್( ಪಕ್ಷೇತರ), ವಾರ್ಡ್ ಸಂಖ್ಯೆ 13 ಮೀನುಪೇಟೆ 2 ಕೆ.ಬಿ ಹರ್ಷವರ್ಧನ್ (ಬಿಜೆಪಿ), ದಿನೇಶ್ (ಕಾಂಗ್ರೆಸ್), ವಾರ್ಡ್‍ಸಂಖ್ಯೆ 14 ಗೌರಿಕೆರೆ ಹಾಲಿ ಅಧ್ಯಕ್ಷ ಇ.ಸಿ ಜೀವನ್ (ಬಿಜೆಪಿ), ಸುರೇಶ್ (ಪಕ್ಷೇತರ), ಸಿ.ಕೆ ಪೃಥ್ವಿನಾಥ್ (ಕಾಂಗ್ರೆಸ್), ವಾರ್ಡ್ ಸಂಖ್ಯೆ 15 ಗಾಂಧಿನಗರ ಪಿ.ಎಂ ಸುನೀತಾ(ಬಿಜೆಪಿ), ಅಂತೋಣಿ (ಪಕ್ಷೇತರ), ಪಿ.ಎ ಮಂಜುನಾಥ್ (ಜೆಡಿಎಸ್), ವಾರ್ಡ್‍ಸಂಖ್ಯೆ 16 ಚಿಕ್ಕಪೇಟೆ ಆಶಾ ಸುಬ್ಬಯ್ಯ (ಬಿಜೆಪಿ), ಅನೀತಾ ಥೇರೆಸಾ (ಕಾಂಗ್ರೆಸ್), ವಾರ್ಡ್ ಸಂಖ್ಯೆ 17 ಮೈಕ್ರೊವೇವ್ ಪೂರ್ಣಿಮಾ (ಬಿಜೆಪಿ), ಗಾಯತ್ರಿ ನರಸಿಂಹ (ಕಾಂಗ್ರೆಸ್), ಸುಮಿತ್ರ ಹೆಚ್.ಸಿ. (ಪಕ್ಷೇತರ), ವಾರ್ಡ್ ಸಂಖ್ಯೆ 18 ಶಿವಕೇರಿ ಟಿ.ಕೆ ಯಶೋದ (ಬಿಜೆಪಿ), ಸರೋಜ ಗೋಪಾಲ್ (ಜೆಡಿಎಸ್) ನವೀನ್ ಕೆ.ಟಿ. (ಕಾಂಗ್ರೆಸ್)ನಿಂದ ನಾಮಪತ್ರ ಸಲ್ಲಿಸಿದ್ದಾರೆ. - (ಡಿಎಂಆರ್)