ಶನಿವಾರಸಂತೆ, ಅ. 17: ಶನಿವಾರಸಂತೆ ಸಮೀಪದ ಗುಡುಗಳಲೆ ಬಳಿ ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್ ಸೈಕಲ್ (ಕೆಎ-41 ವಿ-152)ಗೆ ಸ್ಕೂಟರ್ (ಕೆಎ-12 ಆರ್-8401) ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರನ ಬಲದ ಕಾಲಿಗೆ ಗಾಯವಾಗಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಂಡಳ್ಳಿ ಗ್ರಾಮದ ನಿವಾಸಿ ಕೆ.ಆರ್. ರಂಜಿತ್ ಎಂಬಾತ ಮೋಟಾರ್ ಸೈಕಲಿನಲ್ಲಿ ತಮ್ಮ ಸ್ನೇಹಿತನನ್ನು ಬಿಟ್ಟು ವಾಪಾಸ್ ಬರುತ್ತಿರುವಾಗ ಗುಡುಗಳಲೆ ಬಳಿ ಮೋಟಾರ್ ಸೈಕಲ್‍ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಕೆಳಗಡೆ ಬಿದ್ದು ಬಲದ ಕಾಲಿಗೆ ಗಾಯವಾಗಿದೆ. ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ಹಾಸನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಬಗ್ಗೆ ದೊರೆತ ಮಾಹಿತಿ ಮೇರೆ ಪೊಲೀಸರು ಹಾಗೂ ಮೋಟಾರ್ ಸೈಕಲ್‍ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.