ಮಡಿಕೇರಿ, ಅ. 16: ‘ಇಂದಿಗೆ ಸರಿಯಾಗಿ ಎರಡು ತಿಂಗಳು.., ಈ ಪುಟ್ಟ ಜಿಲ್ಲೆಯಲ್ಲಿ ಸುರಿಯುತ್ತಿದ್ದ ಮಹಾ ಮಳೆಯೊಂದಿಗೆ ಜೀವ, ಆಸ್ತಿ - ಪಾಸ್ತಿ ಕಳೆದುಕೊಂಡವರ ಕಣ್ಣೀರು ಕೋಡಿ ಹರಿದು.., ಇಂದಿಗೂ ಹರಿಯುತ್ತಿದೆ ಸಂತ್ರಸ್ತರಾದವರ ಕಣ್ಣೀರು, ಇವರುಗಳ ಕಣ್ಣೀರಿಗೆ ಅಕ್ಷರದ ರೂಪದಲ್ಲಿ ಸಾಂತ್ವನ ಹೇಳುವ ಅಪರೂಪದ ಕಾರ್ಯಕ್ರಮ ಇದಾಗಿತ್ತು...!’ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ‘ಸಂತ್ರಸ್ತರಿಗೆ ಸಾಂತ್ವನ - ಬಂದವರಿಗೆ ತಣ್ಣೀರು’ ಎಂಬ ಘೋಷವಾಕ್ಯದಡಿ ನಡೆದ ದಸರಾ ಕವಿಗೋಷ್ಠಿಯಲ್ಲಿ ಕವಿಮನಸುಗಳು, ನೊಂದವರಿಗಾಗಿ ಮಿಡಿದವು. ಅತಿಥಿಗಳಾದಿಯಾಗಿ ಹೇಳುವ ಅಪರೂಪದ ಕಾರ್ಯಕ್ರಮ ಇದಾಗಿತ್ತು...!’ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ‘ಸಂತ್ರಸ್ತರಿಗೆ ಸಾಂತ್ವನ - ಬಂದವರಿಗೆ ತಣ್ಣೀರು’ ಎಂಬ ಘೋಷವಾಕ್ಯದಡಿ ನಡೆದ ದಸರಾ ಕವಿಗೋಷ್ಠಿಯಲ್ಲಿ ಕವಿಮನಸುಗಳು, ನೊಂದವರಿಗಾಗಿ ಮಿಡಿದವು. ಅತಿಥಿಗಳಾದಿಯಾಗಿ ಹೇಳುವ ಅಪರೂಪದ ಕಾರ್ಯಕ್ರಮ ಇದಾಗಿತ್ತು...!’

ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ‘ಸಂತ್ರಸ್ತರಿಗೆ ಸಾಂತ್ವನ - ಬಂದವರಿಗೆ ತಣ್ಣೀರು’ ಎಂಬ ಘೋಷವಾಕ್ಯದಡಿ ನಡೆದ ದಸರಾ ಕವಿಗೋಷ್ಠಿಯಲ್ಲಿ ಕವಿಮನಸುಗಳು, ನೊಂದವರಿಗಾಗಿ ಮಿಡಿದವು. ಅತಿಥಿಗಳಾದಿಯಾಗಿ ‘ಸಾಂತ್ವನದ ನುಡಿಗಳು’ ಎಂದು ಪರಿಹಾರ ಕೇಂದ್ರದಲ್ಲಿನ ಸ್ಥಿತಿ-ಗತಿಯ ಬಗ್ಗೆ ದುಃಖಿಸಿದರು. ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ತಮ್ಮ ಆಂಗ್ಲ ಭಾಷಾ ‘ಓಮೆನ್’ (ಶಕುನ) ಕವನದಲ್ಲಿ ಕತ್ತಲಲ್ಲೂ ನಂಬಿಕೆಯಿಂದ ಬೆಳಕನ್ನು ಹುಡುಕುವ ಧೈರ್ಯ ತುಂಬಿದರು. ಪುದಿಯನೆರವನ ರೇವತಿ ರಮೇಶ್ ‘ಪೃಥ್ವಿಯ ಅಂತರಾಳದ ಕೂಗು’ ಎಂದು ಪ್ರಕೃತಿಯಿಂದಾದ ಅನಾಹುತಗಳ ಬಗ್ಗೆ ತೆರೆದಿಟ್ಟರು. ಉಪನ್ಯಾಸಕಿ ಕೆ. ಜಯಲಕ್ಷ್ಮಿ ‘ನನ್ನ ಅಳಲಿಗೆ ಹೆಸರಿಡಲಾರೆ’ ಎಂದು ಒಂದಿಲ್ಲೊಂದು ದಿನ ಎಲ್ಲವನ್ನು ಕಳೆದು ಕೊಳ್ಳಲೇಬೇಕಿದೆ

(ಮೊದಲ ಪುಟದಿಂದ) ಧೈರ್ಯಗುಂದದಂತೆ ಕರೆ ನೀಡಿದರು. ತಮಿಳುನಾಡಿನಿಂದ ಬಂದಿದ್ದ ಪತ್ರಕರ್ತ ಪಾಂಡ್ಯನ್ ಅವರು ‘ಏನಕೊರು ಆಸೆ’ ಎಂದು ತಮಿಳಿನಲ್ಲಿ ಕೊಡಗಿನ ದುರಂತದ ಬಗ್ಗೆ ಮರುಗಿದರು.

ಕವಯತ್ರಿ ಪೂಜಾರಿರ ಕೃಪಾ ದೇವರಾಜ್ ‘ದಿಬ್ಬಣದಲ್ಲಿ ಸಾವಿನ ಸೂತಕ’ ಎಂದು ಸುಂದರವಾಗಿದ್ದ ಚಾರಣಾ ಪ್ರಿಯರ ಬೆಟ್ಟಸಾಲುಗಳು ಕೊಚ್ಚಿ ಹೋಗಿ ಮದುವೆ ದಿಬ್ಬಣಗಳ ದಿಬ್ಬಗಳಂತಿದ್ದ ನನ್ನೂರು ಸಾವಿನ ಮನೆಯಾಗಿದೆ ಎಂದು ಮರುಗಿದರು. ಉಪನ್ಯಾಸಕ ಸಿದ್ದರಾಜು ಬೆಳ್ಳಯ್ಯ ಅವರು ‘ದಕ್ಷಿಣ ಕಾಶ್ಮೀರದ ಕನವರಿಕೆ’ ಎನ್ನುತ್ತಾ ಪ್ರಕೃತಿಯ ಮುನಿಸಿನೊಂದಿಗೆ ನೊಂದವರ ಬಗ್ಗೆ ಕನವರಿಸಿದರು. ಶಿಕ್ಷಕಿ ಮಾಲಾದೇವಿ ಮೂರ್ತಿ ‘ಅಬ್ಬಾ ಕರಾಳ ನೆನಪು’ ಎನ್ನುತ್ತಾ ಆ ದಿನಗಳ ಕರಾಳ ಛಾಯೆಯನ್ನು ಮತ್ತೊಮ್ಮೆ ನೆನೆದರು. ಹಿರಿಯ ಸಾಹಿತಿ ಬಿ.ಎ. ಷಂಶುದ್ದೀನ್ ‘ ಅಹಂಕಾರಿಗಳಿಗೆ ಸವಾಲು’ ಎನ್ನುತ್ತಾ ಮಾನವನ ಅಟ್ಟಹಾಸಕ್ಕೆ ಪ್ರಕೃತಿ ಮುನಿದಿದ್ದು, ಮತ್ತೆ ಮುನಿಯಳಿದ್ದಾಳೆ ಎಂಬ ಅಂಶವನ್ನು ತೆರೆದಿಟ್ಟರು. ಪತ್ರಕರ್ತ ವಿಘ್ನೇಶ್ ಎಂ. ಭೂತನಕಾಡು ‘ನಡಂದದ್ ನಿಜಂದಾನಾ..?’ ಎಂದು ಶಾಂತವಾಗಿದ್ದ ಕಾವೇರಿ ನಾಡು ಇಷ್ಟೊಂದು ಕುಪಿತಳಾಗಿದ್ದನ್ನು ನೆನಪಿಸಲಸಾಧ್ಯ ಎಂದು ತಮಿಳಿನಲ್ಲಿ ಭಾವನೆಗಳನ್ನು ಹೊರಗೆಡಹಿದರು. ಅಂಚೆ ಇಲಾಖೆ ಅಧಿಕಾರಿ ಟಿ.ಪಿ. ಶ್ರೀನಿವಾಸ್ ‘ನಿನ್ನೂರು ಸ್ವರ್ಗ’ ಎನ್ನುತ್ತಾ ಸ್ವರ್ಗವಾಗಿದ್ದ ಕೊಡಗಿನಲ್ಲಿ ಮಾನವನ ಅಟ್ಟಹಾಸದಿಂದ ನಲುಗಿ ಹೋಗಿರುವ ಬಗ್ಗೆ ಬೆಳಕು ಚೆಲ್ಲಿದರು.

ಪತ್ರಕರ್ತ ಎಂ.ಎ. ಅಬ್ದುಲ್ಲ ‘ಪ್ರಕೃತಿಡೋ ಮನಸ್’ ಎನ್ನುತ್ತಾ ಬ್ಯಾರಿ ಭಾಷೆಯಲ್ಲಿ ಪ್ರಕೃತಿಯ ಅಳಲನ್ನು ತೋಡಿಕೊಂಡರು. ಚುಟುಕು ಕವಿ ಹಾ.ತಿ. ಜಯಪ್ರಕಾಶ್ ‘ಕಿತ್ತಳೆ ನಾಡಲ್ಲಿ ಕವಿದ ಕಾರ್ಮೋಡ’ ಎಂದು ಅನಾಹುತವಾದಾಗ ಜಿಲ್ಲಾಧಿಕಾರಿಗಳ, ಜನರ ಸ್ಪಂದನ, ನೆರವುಗಳನ್ನು ಕೊಳ್ಳೆಹೊಡೆದವರ ಬಗ್ಗೆ ತಮ್ಮದೇ ಶೈಲಿಯಲ್ಲಿ ತೆರೆದಿಟ್ಟರು. ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪ ‘ಗಾಯವಾಗಿದೆ ಕೊಡಗಿಗೆ’ ಎನ್ನುತ್ತಾ ಭೂಮಿಯ ನರ್ತನದ 2018 ಮಾಸದ ಕರಾಳ ವೆಂದರಲ್ಲದೆ, ಜೀವಂತ ಸಮಾಧಿಗೆ ಗೋರಿಯೇಕೆಂದು ಪ್ರಶ್ನಿಸಿದರು.

ನಗರಸಭಾ ಸದಸ್ಯೆ ಲೀಲಾ ಶೇಷಮ್ಮ ಅವರು ಪ್ರಕೃತಿ ಮುನಿಸಿನಿಂದಾದ ದುರಂತದಲ್ಲಿ ನಾಶಕ್ಕೊಳಗಾದ ಪ್ರದೇಶಗಳ ಬಗ್ಗೆ ಬೆಳಕು ಚೆಲ್ಲಿದರು. ಪತ್ರಕರ್ತ ಎಂ.ಎ. ಅಜೀಜ್ ‘ಎಂಡೆ ನಾಡ್’ ಎಂದು ಕಾವೇರಿ ನಾಡಿನಲ್ಲಾದ ದುರಂತ, ನೋವುಂಡವರ ಬಗ್ಗೆ ಮಲಯಾಳಂ ಭಾಷೆಯಲ್ಲಿ ಮರುಗಿದರು. ಪತ್ರಕರ್ತ ವಿನೋದ್ ಮೂಡಗದ್ದೆ, ‘ನನ್ನವ್ವ ’ ಎನ್ನುತ್ತಾ ಮಲಗಿರುವ ಭೂತಾಯಿಯನ್ನು ಅಮ್ಮನಿಗೆ ಹೋಲಿಸಿ, ಆಗುತ್ತಿರುವ ಅಕ್ರಮಣದ ಬಗ್ಗೆ ಅರೆಭಾಷೆಯಲ್ಲಿ ಗಮನ ಸೆಳೆದರು. ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ‘ತಾಯೇ ಅವತರಿಸು’ ಎನ್ನುತ್ತಾ ಪರಿಸರ ನಾಶ, ಮಾಲಿನ್ಯ, ಪ್ರವಾಸಿಗರಿಂದಾಗಿ ಆಗುತ್ತಿರುವ ಪರಿಣಾಮಗಳ ಬಗ್ಗೆ ತೆರೆದಿಟ್ಟರು. ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ‘ಸುರಿದ ಕಣ್ಣೀರಿಗೆ ಹರಿದ ತಣ್ಣೀರು’ ಎನ್ನುತ್ತಾ ಕಣ್ಣೀರಿಡುತ್ತಿರುವ ಸಂತ್ರಸ್ತರ ನೋವಿಗೆ ಸ್ಪಂದಿಸಿದರು.

ಸಮಾಜಸೇವಕಿ ಎಂ.ಎ. ರುಬೀನ ಅವರು, ‘ಕಣ್ಣಂಚಿನಲ್ಲಿ ಜಾರಿದ ಕಣ್ಣೀರು’ ಒರೆಸುತ್ತಾ ಹೆಮ್ಮೆತ್ತಾಳಿನಲ್ಲಿ ತಾಯಿ - ಮಗ ಭೂ ಸಮಾಧಿಯಾದ ಚಿತ್ರಣವನ್ನು ಮನಮಿಡಿಯುವಂತೆ ತೆರೆದಿಟ್ಟರು. ಅರೆಭಾಷೆ ಅಕಾಡೆಮಿ ಸದಸ್ಯೆ ಕಡ್ಲೇರ ತುಳಸಿ ಮೋಹನ್ ‘ಸಂತ್ರಸ್ತರಲ್ಲ ಜನ ಬೆಂದ ಬಂಗಾರ’ ಎನ್ನುತ್ತಾ ಹಾಲುಗಲ್ಲದ ಹಸುಳೆಯನ್ನು ಬಲಿತೆಗೆದುಕೊಂಡ ಪ್ರಕೃತಿಗೆ ಕರುಣೆ ಬಾರಲಿಲ್ಲವೇ? ಎಂದು ಮರುಗಿದರು.

ಗೋಷ್ಠಿಗೆ ಸ್ವಯಂ ಪ್ರೇರಿತರಾಗಿ ಬಹಳಷ್ಟು ಮಂದಿ ಕವಿಗಳು, ಸಾಹಿತಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು, ಸಾರ್ವಜನಿಕರು ಆಗಮಿಸಿ ಸಂತ್ರಸ್ತರಿಗೆ ಸಾಂತ್ವನ ಹೇಳುವಲ್ಲಿ ಕೈ ಜೋಡಿಸಿದರು.

- ಸಂತೋಷ್