ಸೋಮವಾರಪೇಟೆ, ಅ. 16: ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾಡಿ ಗ್ರಾಮದ ಎರಡು ಕುಟುಂಬಗಳಿಗೆ ಧನ ಸಹಾಯ ವಿತರಿಸಲಾಯಿತು. ಪ್ರವಾಹ ಸಂದರ್ಭ ಪಟ್ಟಣದ ಕೊಡವ ಸಮಾಜದಲ್ಲಿ ಆಶ್ರಯ ಪಡೆದು ಇತ್ತೀಚೆಗಷ್ಟೇ ಸ್ವಗ್ರಾಮಕ್ಕೆ ತೆರಳಿರುವ ಕಲ್ಲಾಡಿ ಗ್ರಾಮದ ಲೀಲಾವತಿ ಮತ್ತು ಭಾಗ್ಯವತಿ ಕುಟುಂಬಗಳಿಗೆ ಬೆಂಗಳೂರಿನಲ್ಲಿ ನೆಲೆಸಿರುವ, ಮಂಜೂರು ಗ್ರಾಮದ ಕಿರಣ್ ತಮ್ಮ ಸ್ನೇಹಿತರಿಂದ ಸಂಗ್ರಹಿಸಿದ ನೆರವಿನ ಹಣವನ್ನು ಸಂತ್ರಸ್ತರಿಗೆ ವಿತರಿಸಿದರು. ಈ ಸಂದರ್ಭ ಪಾಲಿಬೆಟ್ಟ ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ಪೃಥ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.