ವೀರಾಜಪೇಟೆ, ಅ. 16: ವೀರಾಜಪೇಟೆ ಬಳಿಯ ಮೈತಾಡಿ ಗ್ರಾಮದ ಕಾವೇರಿ ಹೊಳೆಯ ಬದಿಯಲ್ಲಿ ಮರಳು ತೆಗೆಯಲು ಇರಿಸಿದ್ದ ವಾರೀಸುದಾರರಿಲ್ಲದ 8 ಕಬ್ಬಿಣದ ತೆಪ್ಪಗಳನ್ನು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದು, ಠಾಣೆಯ ವತಿಯಿಂದ 15 ದಿನಗಳ ನಂತರ ಹರಾಜು ಮಾಡಲು ಕ್ರಮ ಕೈಗೊಂಡಿರುವದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9480804956 ಅಥವಾ 08274-257462 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.