ಮಡಿಕೇರಿ, ಅ. 15: ಮೈಸೂರು ದಸರಾ ಉತ್ಸವ ಅಂಗವಾಗಿ ನಡೆಯುತ್ತಿರುವ 5-ಎ ಸೈಡ್ ಸಿ.ಎಂ. ಕಪ್ ಹಾಕಿ ಪಂದ್ಯಾವಳಿಯಲ್ಲಿ ಹಾಕಿ ಕೂರ್ಗ್ ಮಹಿಳೆಯರ ತಂಡ ಫೈನಲ್ ಪ್ರವೇಶಿಸಿದೆ. ಇಂದು ನಡೆದ ಸೆಮಿಫೈನಲ್ಸ್‍ನಲ್ಲಿ ಹಾಕಿ ಕೂರ್ಗ್ ತಂಡ, ಹಾಕಿ ಉಡುಪಿ ತಂಡವನ್ನು 8-0 ಗೋಲುಗಳಿಂದ ಸೋಲಿಸಿ, ಫೈನಲ್‍ಗೇರಿತು. ವಿದ್ಯಾ-3, ಸಂಗೀತ, ಚೆಲುವಾಂಬ, ಮಿಲನ ಹಾಗೂ ಪವಿತ್ರ ತಲಾ ಒಂದು ಗೋಲು ಬಾರಿಸಿದರು. ತಾ. 16ರಂದು (ಇಂದು) ಹಾಕಿ ಕೂರ್ಗ್ ತಂಡ ಹಾಕಿ ಮೈಸೂರು ತಂಡದೆದುರು ಫೈನಲ್‍ನಲ್ಲಿ ಸೆಣಸಲಿದೆ. ತರಬೇತುದಾರರಾಗಿ ಬುಟ್ಟಿಯಂಡ ಚಂಗಪ್ಪ ಕಾರ್ಯನಿರ್ವಹಿಸಲಿದ್ದಾರೆ.