ಸುಂಟಿಕೊಪ್ಪ,ಅ.16: ಮಾದಾಪುರ ಗ್ರಾಮ ಪಂಚಾಯಿತಿ ಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲವೆ ಎಂದು ಗ್ರಾಮಸ್ಥರು ಪ್ರಶ್ನಿಸುವಂತಾಗಿದೆ.
ಆಗಸ್ಟ್ 16,17 ಹಾಗೂ 18 ರಂದು ಮೇಘಸ್ಫ್ಪೋಟಕ್ಕೆ ಬರೆ ಕುಸಿದು ಬಿದ್ದು ಜಲಪ್ರಳಯದಿಂದ ಹಾಲೇರಿ ಗ್ರಾಮದ ಹಲವಾರು ಮಂದಿ ಮನೆ ಮಠ ತೋಟ ಕಳೆದುಕೊಂಡಿದ್ದರು. ಹಾಗೆಯೇ ಬೋಯಿಕೇರಿಯಿಂದ ಹಾಲೇರಿಗೆ ತೆರಳುವ ಅಂದಾಜು 300 ಮೀಟರ್ ದೂರದಲ್ಲಿ ಭಾರೀ ಗಾತ್ರದ ಮರಗಳು ರಸ್ತೆಗೆ ಬಿದ್ದಿದ್ದು, ಇದರಿಂದ ಮಡಿಕೇರಿ ಮಕ್ಕಂದೂರು ಮಾದಾಪುರಕ್ಕೆ ವಾಹನದಲ್ಲಿ ತೆರಳಲು ಸಾಧ್ಯವಾಗುತ್ತಿಲ್ಲ
ಕಾಂಡನಕೊಲ್ಲಿ ಸರಕಾರಿ ಪ್ರಾಥಮಿಕ ಶಾಲೆಗೆ ಈ ರಸ್ತೆಗಾಗಿ ಮಕ್ಕಳು ತೆರಳಲು ಬಿದ್ದ ಮರದ ಅಡಿಯಿಂದ ನುಗ್ಗಿ ಪ್ರಯಾಸದಲ್ಲಿ ತೆರಳುತ್ತಿದ್ದಾರೆ ತುರ್ತು ಚಿಕಿತ್ಸೆ ಅಂಬ್ಯೂಲೆನ್ಸ್ ಬರಲು ಸಾಧ್ಯ ವಾಗುತ್ತಿಲ್ಲ .ಕನಿಷ್ಟ ಈ ಮರಗಳನ್ನು ತೆರವುಗೊಳಿಸಲು ಮಾದಾಪುರ ಪಂಚಾಯಿತಿಯಲ್ಲಿ ಹಣವಿಲ್ಲವೇ ಎಂದು ಮನೋಜ್, ಪ್ರಸನ್ನ ಮತ್ತಿತರರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.