ಮಡಿಕೇರಿ, ಅ. 15: ‘ಕೊಡಗು ಫಾರ್ ಟುಮಾರೋ’ ತಂಡ ಬೇತ್ರಿ ಸೇತುವೆ, ಮೂರ್ನಾಡು ಹಾಗೂ ಬಾಡಗ ರಸ್ತೆಯಲ್ಲಿ ಶ್ರಮದಾನ ಮಾಡಿ ಸುಮಾರು 1.3 ಟನ್ ಕಸ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿದ್ದಾರೆ.
ಕಳೆದೆರಡು ದಿನಗಳಲ್ಲಿ 60 ಮಂದಿಯ ಸ್ವಯಂಸೇವಕರ ತಂಡ ಶ್ರಮದಾನ ನಡೆಸಿ ಪ್ಲಾಸ್ಟಿಕ್ ಬಾಟಲಿ, ಗಾಜಿನ ಬಾಟಲಿ, ಕಸಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ಮರು ಬಳಗೆ ಘಟಕಕ್ಕೆ ಕಳುಹಿಸಿಕೊಡಲಾಯಿತು. ಈ ತಂಡದೊಂದಿಗೆ ರೇಂಜರ್ಸ್, ರೋವರ್ಸ್ ಹಾಗೂ ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಸ, ತ್ಯಾಜ್ಯಗಳನ್ನು ಅಲ್ಲಲ್ಲೇ ಎಸೆದು ಪರಿಸರ ಮಲಿನಗೊಳಿಸದೆ. ಕಸದ ತೊಟ್ಟಿಗಳಲ್ಲಿ ಹಾಕಿ ಸ್ವಚ್ಛತೆ ಕಾಪಾಡುವಂತೆ ‘ಕೊಡಗು ಫಾರ್ ಟುಮೊರೋ’ ತಂಡ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.