ಕುಶಾಲನಗರ, ಅ. 13: ಬೆಂಗಳೂರಿನ ಪರಿವರ್ತನ ಟ್ರಸ್ಟ್ ಮತ್ತು ಕೊಡಗು ಹಿಂದೂ ಜಾಗರಣ ವೇದಿಕೆ ಸಹಯೋಗದಲ್ಲಿ ಮಡಿಕೇರಿಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗಿನ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ 50 ಮಂದಿ ಸಂತ್ರಸ್ತರುಗಳಿಗೆ ಆಯುಧ ಪೂಜಾ ಮತ್ತು ವಿಜಯದಶಮಿ ಪ್ರಯುಕ್ತ ಸಿದ್ಧ ಉಡುಪುಗಳನ್ನು ವಿತರಿ¸ Àಲಾಯಿತು.

ಇದೇ ಸಂದರ್ಭ ಕುಶಾಲನಗರ ಮೂಲದ ವೈದ್ಯ ಡಾ. ಹರ್ಷ ಕೊಡಗರಹಳ್ಳಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಬೋಜಮ್ಮ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ರೂ. 20 ಸಾವಿರ ಧನ ಸಹಾಯ ಮಾಡಿದರು. ನಂತರ ಮಾತನಾಡಿದ ಅವರು, ಸಂತ್ರಸ್ತರಿಗೆ ಕೈಲಾದ ಅಳಿಲು ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತನಾಗಿದ್ದು ಸಂತ್ರಸ್ತರಿಗೆ ಅಗತ್ಯವೆನಿಸಿದ ವಸ್ತುಗಳ ಪಟ್ಟಿ ನೀಡಿದಲ್ಲಿ ಕೂಡಲೆ ಒದಗಿಸಲಾಗುವ ದೆಂದು ತಿಳಿಸಿದರು. ಕಾರ್ಯಕ್ರಮ ದಲ್ಲಿ ಹಿಂದೂ ಜಾಗರಣ ವೇದಿಕೆ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕಾರ್ಯದರ್ಶಿ ಕುಕ್ಕೇರ ಅಜಿತ್, ಬಿ.ಜೆ.ಪಿ. ಯುವ ಮೋರ್ಚಾದ ಎಂ.ಡಿ. ಕೃಷ್ಣಪ್ಪ (ಕಿಟ್ಟಿ), ಡಾಲು, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ನವೀನ್ ದೇರಳ, ಗಣೇಶ್ ಕಡಗದಾಳು ಸೇರಿದಂತೆ ಇನ್ನಿತರ ಪ್ರಮುಖರು ಪಾಲ್ಗೊಂಡಿದ್ದರು.