*ಗೋಣಿಕೊಪ್ಪ, ಅ. 13 : ಜಿಲ್ಲಾ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ವತಿಯಿಂದ ಅರಣ್ಯ ಭೂಮಿ ಹಕ್ಕು ಅನುಷ್ಠಾನಕ್ಕಾಗಿ ಅಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹವನ್ನು ಬುಡಕಟ್ಟು ಜನರು ನಿಟ್ಟೂರು, ಕಾರ್ಮಾಡು ಗ್ರಾ.ಪಂ. ಎದುರು ನಡೆಸುತ್ತಿದ್ದಾರೆ.
ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ನಮ್ಮ ಹಕ್ಕು ನಮಗೆ ನೀಡಿ ನಮಗೆ ಅರಣ್ಯದಲ್ಲಿ ವಾಸಿಸಲು ಬಿಡಿ ಎಂದು ಬೇಡಿಕೆಗಳನ್ನು ಇಟ್ಟು ನೂರಕ್ಕೂ ಹೆಚ್ಚು ಜನರು ಕಳೆದ ಎರಡು ದಿನಗಳಿಂದ ಧರಣಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬುಡಕಟ್ಟು ಸಮುದಾಯ ಹೋರಾಟ ಸಮಿತಿ ಸಂಚಾಲಕ ಗಪ್ಪು ಹಾಗೂ ಇತರ ಪ್ರಮುಖರ ಸಮ್ಮುಖದಲ್ಲಿ ಹೋರಾಟವನ್ನು ಮುಂದುವರಿಸಲಾಗಿದೆ.