ಆಲೂರು-ಸಿದ್ದಾಪುರ, ಅ. 13: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ಬಾಲೆ ವಲಯದ ಆಲೂರು-ಸಿದ್ದಾಪುರ ಕಾರ್ಯಕ್ಷೇತ್ರ ಮಾಲಂಬಿ ಒಕ್ಕೂಟದ ರಾಜೇಶ್ವರಿ ಸ್ವಸಹಾಯ ಸಂಘದ ಸದಸ್ಯೆ ಭಾಗ್ಯ ಅವರ ಪತಿ ಸುಬ್ರಮಣಿ ಅವರು ಮರಣ ಹೊಂದಿರುವ ಹಿನ್ನೆಲೆ ಪತ್ನಿ ಭಾಗ್ಯ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜೀವ ವಿಮೆ ಭದ್ರತೆಯ ರೂ. 1 ಲಕ್ಷವನ್ನು ಅವರಿಗೆ ವಿತರಣೆ ಮಾಡಲಾಯಿತು. ಮಾಲಂಬಿ ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ ಫಲಾನುಭವಿಗೆ ರೂ. 1 ಲಕ್ಷದ ಚೆಕ್‍ಅನ್ನು ವಿತರಿಸಿದರು. ಈ ಸಂದರ್ಭ ಒಕ್ಕೂಟದ ಜಾನಕಿ ಗಂಗಾಧರ್ ಹಾಗೂ ಸೇವಾ ಪ್ರತಿನಿಧಿಗಳು ಹಾಜರಿದ್ದರು.