ಶನಿವಾರಸಂತೆ, ಅ. 10: ಮಹಿಳಾ ಸದಸ್ಯೆಯರ ಪರಸ್ಪರ ಸಹಕಾರ ಮನೋಭಾವದಿಂದ ಮಾತ್ರ ಮಹಿಳಾ ಸಹಕಾರ ಸಂಘ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ ಎಂದು ಸಂಘದ ಅಧ್ಯಕ್ಷೆ ಭುವನೇಶ್ವರಿ ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಮಹಿಳಾ ಸಹಕಾರ ಸಂಘದ 2017-18ನೇ ಸಾಲಿನ 63ನೇ ವಾರ್ಷಿಕ ಮಹಾಸಭೆ ಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಹಿಳೆಯರ ಬಹುಮುಖ ಪ್ರತಿಭೆ ಹೊರಹೊಮ್ಮಲು ಸಂಘ ವೇದಿಕೆಯಾಗಿದೆ. ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಮಹಿಳೆಯರು ಅವಕಾಶಗಳನ್ನು ಸದುಪಯೋಗಪಡಿಸಿ ಕೊಳ್ಳುತ್ತಿರುವದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು. ಈ ಸಂದರ್ಭ ಸಂಘದಲ್ಲಿ 38 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಸಿಬ್ಬಂದಿ ಮಣಿಯಮ್ಮ ಅವರನ್ನು ಗೌರವಿಸಲಾಯಿತು.
ಕಿರಿಯರ- ಹಿರಿಯರ ಛದ್ಮವೇಷ ಸ್ಪರ್ಧೆ, ಪಿಕ್ ಆ್ಯಂಡ್ ಆ್ಯಕ್ಟ್ ಹಾಗೂ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಹಾಸಭೆಯ ಮೀಟಿಂಗ್ ನೋಟೀಸ್, ನಡಾವಳಿಕೆ, ಆಡಳಿತ ಮಂಡಳಿ ವರದಿ, ಲೆಕ್ಕ ಪರಿಶೋಧನಾ ವರದಿ, ಆಯ - ವ್ಯಯ ತಖ್ತೆಯನ್ನು ನಿರ್ದೇಶಕಿಯರಾದ ರೇಖಾ, ಅನಿತಾ, ಸ್ವಾತಿ ಹಾಗೂ ಶಿಲ್ಪಾ ಸಭೆಯಲ್ಲಿ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ರೇಖಾ ಸೋಮಶೇಖರ್, ಕಾರ್ಯದರ್ಶಿ ಗೀತಾಹರೀಶ್, ನಿರ್ದೇಶಕರಾದ ಹೆಚ್.ಎಸ್. ಸೌಭಾಗ್ಯಲಕ್ಷ್ಮೀ, ಶಿಲ್ಪಾ ಶರತ್, ಶೀಲಾ, ಅನಿತಾ ಶೇಖರ್, ವಾಣಿ ಹೇಮಂತ್, ಶೋಭಾ, ಉಷಾ ಜಯೇಶ್, ಸುಮಿತ್ರಾ, ಸ್ವಾತಿ ಹರೀಶ್, ಶಿಕ್ಷಕಿ ಶೋಭಾ ಉಪಸ್ಥಿತರಿದ್ದರು.